ಕೊರೋನಾ ತಡೆ ನಿಯಮಾವಳಿ ಪಾಲಿಸಿ ನಂಜುಂಡೇಶ್ವರನ ದೊಡ್ಡಜಾತ್ರೆ ಯಶಸ್ವಿಯಾಗಿ ನಡೆಸಬೇಕು- ಶಾಸಕ ಹರ್ಷವರ್ಧನ್…

ಮೈಸೂರು,ಪೆಬ್ರವರಿ,20,2021(www.justkannada.in): ನಂಜುಂಡೇಶ್ವರನ ದೊಡ್ಡ ಜಾತ್ರೆ ವಿಶ್ವ ಪ್ರಸಿದ್ಧಿ. ಈ ಬಾರಿ ನಡೆಯುವ ದೊಡ್ಡ ಜಾತ್ರೆಯನ್ನು  ಸರ್ಕಾರದ ಕೋರೋನಾ ತಡೆ ನಿಯಮಾವಳಿಗಳನ್ನು ಪಾಲಿಸಿ ನಡೆಸಬೇಕು ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ತಿಳಿಸಿದರು.jk

ನಂಜನಗೂಡಿನ ನಂಜುಂಡೇಶ್ವರನ ದೊಡ್ಡಜಾತ್ರೆಯ ಹಿನ್ನೆಲೆ ನಂಜುಂಡೇಶ್ವರನ ದೇವಾಲಯದ ದಾಸೋಹ ಭವನದಲ್ಲಿ ಶಾಸಕ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ  ನಡೆಯಿತು.  ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರ್ಷವರ್ಧನ್, ನಂಜನಗೂಡಿನ ನಂಜುಂಡೇಶ್ವರನ ದೊಡ್ಡ ಜಾತ್ರೆ ವಿಶ್ವ ಪ್ರಸಿದ್ಧಿ. ಈ ಬಾರಿ ನಡೆಯುವ ದೊಡ್ಡ ಜಾತ್ರೆಯನ್ನು  ಸರ್ಕಾರದ ಕೋರೋನಾ ತಡೆ  ನಿಯಮಾವಳಿಗಳನ್ನು ಪಾಲಿಸಿ ನಡೆಸಬೇಕು. ಹೊರರಾಜ್ಯ ಮತ್ತು ವಿವಿಧ ಜಿಲ್ಲೆಗಳಿಂದ ತಂಡೋಪತಂಡವಾಗಿ ಆಗಮಿಸಲಿರುವ ಭಕ್ತರಲ್ಲಿ ಕೊರೋನಾ ಜಾಗೃತಿ ಮೂಡಿಸಬೇಕು. ದೇವಾಲಯಕ್ಕೆ ಆಗಮಿಸುವ ಭಕ್ತ ಸಮೂಹಕ್ಕೆ ಮೂಲಭೂತ ಸೌಲಭ್ಯಗಳ ಕೊರತೆ ಇಲ್ಲದ ರೀತಿಯಲ್ಲಿ ದೊಡ್ಡ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಬೇಕು. ನಂಜನಗೂಡು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನ ಅಂಬೇಡ್ಕರ್ ವೃತ್ತ ಮತ್ತು ಇನ್ನೂ ಅನೇಕ ಪ್ರಮುಖ ಸ್ಥಳಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದರು.

ಲೋಕೋಪಯೋಗಿ ಇಲಾಖೆ ಜಿಲ್ಲಾ ಪಂಚಾಯಿತಿ ಉಪ ವಿಭಾಗ ಪೊಲೀಸ್ ಇಲಾಖೆ ಸೇರಿ ನಂಜನಗೂಡಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಮೇಲೆ ಜವಾಬ್ದಾರಿ ತುಂಬಾ ಇರುತ್ತದೆ ಈಗಾಗಲೇ ದಾಸೋಹ ಭವನವನ್ನು ತೆರೆದು ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕುಡಿಯುವ ನೀರು ,ಶೌಚಾಲಯದ ವ್ಯವಸ್ಥೆ ಮಹಿಳೆಯರು ಮಕ್ಕಳ ಬಗ್ಗೆ ಸಂಪೂರ್ಣ ನಿಗಾ ವಹಿಸಿ ಜೊತೆಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪೊಲೀಸ್ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೊಡ್ಡ ಜಾತ್ರೆಯ ವಿಶೇಷತೆ ಗಳನ್ನು ರವಾನಿಸಿ ಹೆಚ್ಚು ಪೊಲೀಸರ ನಿಯೋಜನೆಗೆ ಮುಂದಾಗಬೇಕು ಎಂದು ಸಭೆಯಲ್ಲಿ ಶಾಸಕ ಹರ್ಷವರ್ಧನ್ ಸಲಹೆ ನೀಡಿದರು.corona-rule- successfully - Nanjundeshwara big jatra mahotsava-MLA-Harshavardhan

ಸಭೆಯಲ್ಲಿ ತಹಸೀಲ್ದಾರ್ ಮೋಹನ್ ಕುಮಾರಿ ಎ ಸಿ  ವೆಂಕಟರಾಜು ಡಿವೈಎಸ್ಪಿ ಗೋವಿಂದರಾಜು  ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಸಲಹ ಸಮಿತಿಯ ಅಧ್ಯಕ್ಷರು ಸದಸ್ಯರು ಮತ್ತು ಪಟ್ಟಣದ ಜನಪ್ರತಿನಿಧಿಗಳು ಮುಖಂಡರು ಹಾಜರಿದ್ದರು.

Key words: corona-rule- successfully – Nanjundeshwara big jatra mahotsava-MLA-Harshavardhan