ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೂ ಕರೋನಾ ಪಾಸಿಟಿವ್..?

ರಾಮನಗರ,ಜು,4,2020(www.justkannada.in): ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಎಂಎಲ್ ಸಿ ಪುಟ್ಟಣ್ಣ ಅವರೇ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಪುಟ್ಟಣ್ಣ ಅವರಿಗೆ ಜ್ವರವಿತ್ತು. ಹೀಗಾಗಿ ಕ್ವಾರಂಟೈನ್ ನಲ್ಲಿದ್ದರು.  ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆ ನಿನ್ನೆಯೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.Corona- Positive  -MLC-puttanna

ಇನ್ನು ಎಂಎಲ್ ಸಿ ಪುಟ್ಟಣ್ಣ ಕೊರೋನಾದಿಂದ ಶೀಘ್ರ ಗುಣಮುಖರಾಗುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

Key words: Corona- Positive  -MLC-puttanna