ದೇಶದಲ್ಲಿ ಒಂದೇ ದಿನ 48,513 ಮಂದಿಗೆ ಕೊರೋನಾ ಪಾಸಿಟಿವ್: 768 ಮಂದಿ ಬಲಿ…

kannada t-shirts

ನವದೆಹಲಿ,ಜು,29,2020(www.justkannada.in):  ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ 15 ಲಕ್ಷ ಗಡಿ ದಾಟಿದೆ. ಒಂದೇ ದಿನ 48,513 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.jk-logo-justkannada-logo

ಕಳೆದ 24 ಗಂಟೆಗಳಲ್ಲಿ 768 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು ಒಟ್ಟು ಈವರೆಗೆ ದೇಶದಲ್ಲಿ 34,193 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.  ಕಳೆದ 24 ಗಂಟೆಯಲ್ಲಿ 48,513 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 15,31669ಕ್ಕೆ ಏರಿಕೆಯಾಗಿದೆ.corona-positive-48513-single-day-country

15,31669 ಸೋಂಕಿತರ ಪೈಕಿ 988029 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 509,447 ಕೊರೋನಾ ಸಕ್ರಿಯ ಪ್ರಕರಣಗಳಿವೆ.

Key words: Corona Positive – 48,513 – single day – country.

website developers in mysore