ದೇಶದಲ್ಲಿ ಒಂದೇ ದಿನ 24,248 ಮಂದಿಗೆ ಕೊರೋನಾ ಪಾಸಿಟಿವ್…

ನವದೆಹಲಿ,ಜು,6,2020(www.justkannada.in):  ದೇಶದಾದ್ಯಂತ  ಮಾರಣಾಂತಿಕ ಕೊರೋನಾ ರಣಕೇಕೆ ಹಾಕುತ್ತಿದ್ದು ದೇಶದಲ್ಲಿ ಒಂದೇ ದಿನ 24,248 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 24,248 ಹೊಸ  ಕೊರೋನಾ ಪ್ರಕರಣಗಳನ್ನು ಪತ್ತೆಯಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 6,97,413ಕ್ಕೆ ಏರಿಕೆ ಆಗಿದೆ.Corona positive - 24,248 people - single day - country.

ಇನ್ನು ಒಂದೇ ದಿನ ದೇಶದಲ್ಲಿ ಕೊರೋನಾಗೆ 525 ಮಂದಿ ಬಲಿಯಾಗಿದ್ದಾರೆ.  ಈವರೆಗೆ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 19,693ಕ್ಕೆ ಏರಿಕೆ ಆಗಿದೆ. ಸದ್ಯ ದೇಶದಲ್ಲಿ 2,53,287 ಸಕ್ರಿಯ ಪ್ರಕರಣಗಳಿದ್ದು 4,24,433 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Key words: Corona positive – 24,248 people – single day – country.