ಒಂದೇ ದಿನ ಪೊಲೀಸ್ ಠಾಣೆಯೊಂದರ 12 ಸಿಬ್ಬಂದಿಗೆ ಕೊರೋನಾ ಪಾಸಿಟಿವ್

ಬೆಂಗಳೂರು,ಜು,7,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರಿಗೆ ಬೆಂಬಿಡದೇ ಕಾಡುತ್ತಿದ್ದು ಈ ನಡುವೆ  ಹೆಚ್‌ಎಎಲ್ ಪೊಲೀಸ್ ಠಾಣೆಯ 12 ಪೊಲೀಸರಿಗೆ ಕೊರೊನಾ ವೈರಸ್ ಸೋಂಕು  ವಕ್ಕರಿಸಿದೆ.jk-logo-justkannada-logo

 ಹೆಚ್‌ಎಎಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್  ಸೇರಿ 12 ಪೊಲೀಸ್ ಸಿಬ್ಬಂದಿಗೆ ಕೊರೋನಾ ವೈರಸ್ ತಗುಲಿದ್ದು, ಸದ್ಯ ಇಡೀ ಪೊಲೀಸ್ ಠಾಣೆಯನ್ನು ಬಿಬಿಎಂಪಿ ಸಿಬ್ಬಂದಿ ಸೀಲ್​ಡೌನ್ ಮಾಡಿದ್ದಾರೆ. ರಾಜ್ಯದಲ್ಲಿ ನೂರಾರು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಹರಡಿದ್ದು ನಿನ್ನೆ ಪೊಲೀಸರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ  ಹೆಚ್ ಎಎಲ್  ಠಾಣೆಯ 12 ಜನ ಪೊಲೀಸರಿಗೆ ಕೊರೋನಾ ಸೋಂಕು ದೃಢವಾಗಿದೆ.corona-positive-12-staff-police-station-single-day

ಸದ್ಯ  ಸೋಂಕಿತ 12 ಮಂದಿ ಪೊಲೀಸರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಚ್‌ಎಎಲ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.

Key words: Corona positive – 12 staff -police station – single day.