ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ಕೊರೋನಾ ಭೀತಿ: ಎಎಸ್ ಐ ಓರ್ವರ ಅಳಿಯನಿಗೆ ಕೊರೋನಾ ಪಾಸಿಟೀವ್ ….  

ಮೈಸೂರು,ಜೂ,20,2020(www.justkannada.in): ಮೈಸೂರು ದೇವರಾಜ ಪೊಲೀಸ್ ಠಾಣೆಗೂ ಇದೀಗ ಕೊರೋನಾ ಭೀತಿ ಎದುರಾಗಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಎಎಸ್ ಐ ಓರ್ವರ ಅಳಿಯ ಚೆನ್ನೈನಿಂದ ಬಂದಿದ್ದವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ.

ಎಎಸ್ ಐ ಚೆನ್ನೈನಿಂದ ಬಂದ ಅಳಿಯನನ್ನು ಕೆ.ಆರ್.ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಇದೀಗ ಚೆನ್ನೈನಿಂದ ಬಂದ ವ್ಯಕ್ತಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಎಎಸ್ ಐ ಕೆ.ಆರ್.ಆಸ್ಪತ್ರೆಗೆ ತೆರಳಿ ಅಳಿಯನನ್ನು ಮಾತಾಡಿಸಿಕೊಂಡು ಬಂದಿದ್ದು, ಬಳಿಕ ಠಾಣೆಗೆ ಬಂದಿದ್ದಾರೆ. ಠಾಣೆಯ ಬಹುತೇಕ ಎಲ್ಲ ಸಿಬ್ಬಂದಿಗಳ ಜೊತೆಯೂ ಮಾತುಕತೆ ನಡೆಸಿದ್ದಾರೆ. ಇದೀಗ ಠಾಣಾ ಸಿಬ್ಬಂದಿಗಳಲ್ಲಿ ಕೊರೋನಾ ಭೀತಿ ಆವರಿಸಿದೆ. corona-police-station-mysore-asi-son-in-law

ಸೋಂಕಿತ ವ್ಯಕ್ತಿ ವರದಿಯ ವರದಿ ಬರುವ ಮುನ್ನವೇ ಎಎಸ್ ಐ ಅವರು ಠಾಣೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ  ದೇವರಾಜ ಪೊಲೀಸ್ ಠಾಣೆ  ಇನ್ಸಪೆಕ್ಟರ್ ಪ್ರಸನ್ನ ಕುಮಾರ್ ಠಾಣೆಯನ್ನು ನಿನ್ನೆ ರಾತ್ರಿಯೇ ಸ್ಯಾನಿಟೈಸರ್ ಮಾಡಿಸಿದ್ದಾರೆ. ಇದೀಗ ಠಾಣೆಯ  ಸಿಬ್ಬಂದಿಗಳಿಗೂ ಕೂಡ ಕೊರೋನಾ ಭಯ  ಆವರಿಸಿದೆ.

Key words: Corona -police station – Mysore-ASI -son-in-law ..