ಈ ಸುದ್ದಿ ಓದಿದ್ರೆ ಈ ಸಾಲಿನ ಎಸ್.ಎಸ್ ಎಲ್ ಸಿ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸೋದು ಖಂಡಿತ…!

 ಬೆಂಗಳೂರು,ಮೇ,7,2021(www.justkannada.in): ಪ್ರಸ್ತುತ ವರ್ಷ ಎಸ್.ಎಸ್.ಎಲ್.ಸಿ.ಪರೀಕ್ಷೆ ಅಗತ್ಯವಿದೆಯೇ? ಇಂಥದೊಂದು ಪ್ರಶ್ನೆ ಈಗ ವಿದ್ಯಾರ್ಥಿಗಳ ಮತ್ತು ಪೋಷಕರ ವಲಯದಲ್ಲಿ ಹರಿದಾಡುತ್ತಿದೆ.ಆದರೆ ಈ ವಿಚಾರವಾಗಿ ಕೆಲವು ಪೋಷಕರ ತರ್ಕಬದ್ದ ವಾದವೂ ಕೂಡ ಬಹಳ ಕುತೂಹಲಕಾರಿ ಹಾಗೂ ವಾಸ್ತವಾಂಶದಿಂದ ಕೂಡಿರುವುದಂತೂ ಕಟು ಸತ್ಯ.jk

ಕಳೆದ ವರ್ಷ 2019-20 ನೇ ಸಾಲಿನಲ್ಲಿ 10ನೇ ತರಗತಿ ಪರೀಕ್ಷೆಯನ್ನು ಹಲವಾರು ಇಲಾಖೆಗಳ ಸಮನ್ವಯದೊಂದಿಗೆ ಯಶಸ್ವಿಯಾಗಿ ನೆಡೆಸಿದ ಹೆಗ್ಗಳಿಕೆ ನಮ್ಮ ಶಿಕ್ಷಣ ಸಚಿವರದ್ದು. ಆಗ ಅದು ಸೂಕ್ತವೂ ಆಗಿತ್ತು ಎಂಬುದು ಅನೇಕರ ಅಭಿಪ್ರಾಯ ಆದರೆ ಈ ವರ್ಷ ಕಳೆದ ವರ್ಷಕ್ಕಿಂತ ಪರಿಸ್ಥಿತಿ ಭಿನ್ನವಾಗಿರುವುದು ಅಷ್ಟೇ ಸತ್ಯ.ಕಳೆದ ವರ್ಷ ವಿದ್ಯಾರ್ಥಿಗಳು 2019 ಜೂನ್ ನಿಂದ 2020 ಮಾರ್ಚ್ 15 ನೇ ತಾರೀಖಿನ ವರೆಗೂ ಶಾಲೆಗೆ ಬಂದಿದ್ದರು ಅವರಿಗೆ ಶಾಲೆಯಲ್ಲಿ ಎಲ್ಲಾ ವಿಷಯದ ಸಿಲಬಸ್ ಬೋಧನೆ ಮಾಡಿ ಮುಗಿಸಲಾಗಿತ್ತು. ಪರೀಕ್ಷೆಯೊಂದೇ ಬಾಕಿ ಉಳಿದಿತ್ತು. ಆದರೆ ಈ ವರ್ಷ ಶೈಕ್ಷಣಿಕ ವರ್ಷದ ಆರಂಭದಿಂದ ಅಂದರೆ ಜೂನ್ 2020 ರಿಂದ ಡಿಸೆಂಬರ್ 2020 ರವರೆಗೆ ಶಾಲೆ ತೆರದಿರಲಿಲ್ಲ. ವಿದ್ಯಾಗಮ ವಠಾರ ಶಾಲೆ ಮುಂತಾದ ವಿಧಾನಗಳಿಂದ ಅವರನ್ನು ಸಂಪರ್ಕಿಸುವ ಕೆಲಸ ಆಗಿತ್ತೇ ಹೊರತು ಸಮರ್ಪಕ ಪಾಠ ಬೋಧನೆ ಆಗಲಿಲ್ಲ. ದೂರದರ್ಶನದ ಚಂದನವಾಹಿನಿಯಿಂದ ಬೋಧನೆಕಾರ್ಯಕ್ರಮ ಇತ್ತಾದರೂ ಗ್ರಾಮೀಣ ಪ್ರದೇಶದ ವಿದ್ಯುತ್‍ ಅಭಾವದ ಹಿನ್ನೆಲೆಯಲ್ಲಿ ಬಹುತೇಕ ಮಕ್ಕಳು ಅದರಿಂದಲೂ ವಂಚಿತ. ಇನ್ನು ಆನ್‍ಲೈನ್ ತರಗತಿಗಳ ವಿಷಯಕ್ಕೆ ಬಂದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೈಗೆಟುಕದ ಸ್ಮಾರ್ಟ್ ಫೋನ್‍ಗಳು, ಫೋನ್‍ ಇದ್ದರೂ ನೆಟ್‍ವರ್ಕ್ ಸಮಸ್ಯೆಗಳ ನಡುವೆಅದು ಎಷ್ಟರ ಮಟ್ಟಿಗೆ ಸಫಲವಾಯಿತೆಂಬುದನ್ನು ದೇವರೇ ಬಲ್ಲ. ಇನ್ನು ಜನವರಿ 2021 ರಿಂದ ಭೌತಿಕ ತರಗತಿಗಳು ಪ್ರಾರಂಭವಾದವಾದರೂ ಸರ್ಕಾವೇ ಹಾಜರಾತಿ ಕಡ್ಡಾಯವಲ್ಲವೆಂಬ ಸುತ್ತೋಲೆ ಹೊರಡಿಸಿತು.

ಇದರಿಂದ ಸರಿಯಾಗಿ ಶಾಲೆಗೆ ಹಾಜರಾಗದೇಇರುವ ಅನೇಕ ಮಕ್ಕಳು ಶಾಲೆಗೆ ಸಮರ್ಪಕವಾಗಿ ಹಾಜರಾಗಲೇ ಇಲ್ಲ. ಪುನ: ಏಪ್ರಿಲ್‍ನಿಂದ ಶಾಲೆ ಬಂದ್‍ ಆಯಿತು. ಒಟ್ಟಾರೆ ಮಕ್ಕಳು 70 ರಿಂದ 80 ದಿನಗಳು ಬಂದಿದ್ದರೆ ಅದೇ ಹೆಚ್ಚು. ಇಷ್ಟರಲ್ಲಿ ಶಿಕ್ಷಕರು ಒಂದು ವರ್ಷದ ಪಾಠಗಳನ್ನು ತರಾತುರಿಯಲ್ಲಿ ಮುಗಿಸಿದ್ದಾರೆಯೇ? ಇಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ಬೇಕೆ ಎಂಬುದು ಪೋಷಕರ ಪ್ರಶ್ನೆ.

ನೆರೆಯ ತಮಿಳುನಾಡಿನಲ್ಲಿ ಮತ್ತು ಕೇಂದ್ರದ ಸಿ.ಬಿ.ಎಸ್.ಸಿ.ಪಠ್ಯಕ್ರಮದ ಶಾಲೆಗಳು 10ನೇ ತರಗತಿ ಪರೀಕ್ಷೆಯನ್ನು ಈ ವರ್ಷವೂ ರದ್ದು ಮಾಡಿವೆ. ನಮ್ಮರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆ ನಡೆಸಲೇಬೇಕು ಎಂಬ ಅನಿವಾರ್ಯತೆಯಾದರೂ ಏನಿದೆ ಎಂಬುದು ತಿಳಿಯುತ್ತಿಲ್ಲ. ಎರೆಡೆರಡು ಡಿಗ್ರಿ ಪಡೆದವರೇ ಕಂಡಕ್ಟರ್ ಕೆಲಸಕ್ಕೆ, ಡಿ’ಗ್ರೂಪ್ ಕೆಲಸಕ್ಕೆ ಅರ್ಜಿ ಹಾಕುವ ಇಂತಹ ಪರಿಸ್ಥಿತಿಯಲ್ಲಿ 10ನೇ ತರಗತಿ ಪಾಸ್ ಸರ್ಟಿಫಿಕೇಟ್‍ಗೆ ಅದೆಂತಹ ಕೆಲಸಕ್ಕೆ ಹೋಗಬಹುದು ಅಬ್ಬಬ್ಬಾ ಅಂದರೆ ಹೆಚ್ಚು ಅಂಕ ಪಡೆದವರಿಗೆ ಖಾಸಗೀ ಕಾಲೇಜಿನಲ್ಲಿ ಪಿಯುಗೆ ಸೇರುವಾಗ ಸ್ವಲ್ಪ ಡೊನೇಷನ್‍ ಕಡಿಮೆ ಆಗಬಹುದು ಅಷ್ಟೆ.

ಮತ್ತೊಂದು ಮುಖ್ಯವಾದ ಅಂಶವನ್ನು ಗಮನಿಸುವುದಾದರೆ ನೆನ್ನೆ ಸುಪ್ರೀಂಕೋರ್ಟ್‍ ಸಹ ಜೂನ್‍ ನಲ್ಲಿ ಕೋವಿಡ್ 3ನೇ ಅಲೆ ಪ್ರಾರಂಭವಾಗುವುದು ಹಾಗೂ ಅದು ಮಕ್ಕಳನ್ನೇ ಹೆಚ್ಚು ಬಾದಿಸುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 3ನೇ ಅಲೆ ಪ್ರಾರಂಭವಾದರೆ ಪೋಷಕರು ಯಾವರೀತಿ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುತ್ತಾರೆ ಇವತ್ತಿನ ಪರಿಸ್ಥಿತಿಯಲ್ಲೇ ಗ್ರಾಮೀಣ ಪ್ರದೇಶಗಳಲ್ಲೂ ಸಹ 2ನೇ ಅಲೆಯೇ ಬಹಳವಾಗಿದೆ ಇನ್ನು 3ನೇ ಅಲೆ ನೆನಸಿಕೊಂಡರೇನೆ ಭಯವಾಗುತ್ತಿದೆ. ಪದವಿ ಪೂರ್ವ ಮಂಡಳಿ ಪರೀಕ್ಷೆಗಳನ್ನೇ ಯಾವಾಗ ನಡೆಸುವುದು ಎಂಬುದೇ ಅನಿಶ್ಚಿತವಾಗಿರುವಾಗ ಇನ್ನು 10ನೇ ತರಗತಿ ಪರೀಕ್ಷೆಯಾವಾಗ ನಡೆಸುವುದು? ಮತ್ತು ಅಲ್ಲಿವರೆಗೆ ಮಕ್ಕಳು ಸಿಲಬಸ್‍ ನ್ನು ಹೇಗೆ ಅಭ್ಯಾಸ ಮುಂದುವರಿಸಿಕೊಂಡು ಹೋಗುವುದು ಮಕ್ಕಳೂ ಸಹ ಎಷ್ಟು ಸಮಯ ಅಂತಾ ಕಾಯುವುದು ಇದಕ್ಕೆಲ್ಲಾ ಆದಷ್ಟು ಬೇಗ ತೀರ್ಮಾನಗಳನ್ನು ತೆಗೆದುಕೊಂಡು ಮಕ್ಕಳಿಗೆ ಮಾನಸಿಕ ನೆಮ್ಮದಿ ಹಾಗೂ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯನ್ನುಕಡಿಮೆ ಮಾಡುವುದು ಒಳ್ಳೆಯದಲ್ಲವೇ?corona-Oppose - SSLC –exam-karnataka

ಇಷ್ಟೆಲ್ಲಾ ಆತಂಕದ ನಡುವೆಯೂ ಪರೀಕ್ಷೆ ನಡೆಸಿ ಸಾಧನೆ ಮಾಡುವುದೇನಿದೆ. ರಾಜ್ಯದಲ್ಲಿ ಪ್ರತೀ ವರ್ಷ ಶೇಕಡ 78 ರಿಂದ 80 ಪರ್ಸೆಂಟ್ ಫಲಿತಾಂಶ ಬಂದೇ ಬರುತ್ತದೆ. ಜೊತೆಗೆ  ಕಳೆದ ವರ್ಷ ಇಲಾಖೆಯೇ ಕೋವಿಡ್‍ ಕಾರಣ ನೀಡಿ ಗ್ರೇಸ್‍ ಕೊಟ್ಟು ಒಂದಷ್ಟು ಫಲಿತಾಂಶವನ್ನು ಹೆಚ್ಚಿಸಿದೆ.  ಉಳಿದ ಶೇಕಡಾ 20 ರಲ್ಲಿ ಶೇಕಡಾ 10 ಪೂರಕಪರೀಕ್ಷೆಯಲ್ಲಿ ಪಾಸಾಗುತ್ತಾರೆ ಇನ್ನುಳಿದ ಶೇಕಡಾ 10 ರಷ್ಟುವಿದ್ಯಾರ್ಥಿಗಳನ್ನು ಫೇಲ್ ಮಾಡಲು ಪರೀಕ್ಷೆ ಮಾಡಬೇಕೆ? ಅದರಲ್ಲೂ ಈ ವರ್ಷ ಇಲಾಖೆಯೇ ಶೇಕಡಾ 30ರಷ್ಟು ಪಠ್ಯವನ್ನೇ ಕಡಿತ ಮಾಡಿದೆ. ಇನ್ನು ಮೌಲ್ಯಮಾಪನದಲ್ಲಿ ಗ್ರೇಸ್‍ ಕೊಡುವುದಿಲ್ಲವೇ ಕೊಟ್ಟೇ ಕೊಡುತ್ತಾರೆ. ಇದರ ಬದಲು ರಾಜ್ಯವೂ ಕೇಂದ್ರದ ಮತ್ತು ತಮಿಳುನಾಡಿನ ಹಾದಿಯಲ್ಲಿ ಸಾಗುವುದು ಉತ್ತಮವಲ್ಲವೇ?

Key words: corona-Oppose – SSLC –exam-karnataka