ಕೊರೊನಾ ಹೊಸ ರೂಪಾಂತರಿ ವೈರಸ್: ಇಲ್ಲಿದೆ ರೋಗ ಲಕ್ಷಣದ ಮಾಹಿತಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

ಬೆಂಗಳೂರು, ನವೆಂಬರ್ 2021 (www.justkannada.in): ಕೊರೊನಾ ವೈರಸ್ ಹೊಸ ರೂಪಾಂತರ ಪರಿಣಾಮಗಳು ಮತ್ತು ಅಪಾಯದ ಬಗ್ಗೆ ಅಧ್ಯಯನ ನಡೆಯುತ್ತಿದೆ.

ಈ ಕುರಿತು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆ, ಸೂಚನೆಗಳನ್ನು ನೀಡಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಹಾಗೂ ಕೈಗಳನ್ನು ಆಗಾಗ ಸ್ವಚ್ಛಗೊಳಿಸುವುದು ಈ ಸೋಂಕಿನಿಂದ ದೂರವಿರಲು ನೆರವಾಗಲಿದೆ ಎಂದು ತಿಳಿಸಲಾಗಿದೆ.

ಓಮಿಕ್ರಾನ್ ರೋಗಲಕ್ಷಣಗಳು ಇತರ ರೂಪಾಂತರಗಳಂತೆ ಕೆಮ್ಮು, ಶೀತ, ಜ್ವರ, ಗಂಟಲು ನೋವು, ತಲೆನೋವು, ರುಚಿ ಮತ್ತು ವಾಸನೆಯ ನಷ್ಟ ಕಾಣಿಸುತ್ತದೆ. ಆದ್ರೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮೂಲಕ ಮಾತ್ರ ಈ ರೂಪಾಂತರವನ್ನು ಕಂಡುಹಿಡಿಯುವ ಏಕೈಕ ಮಾರ್ಗವಾಗಿದೆ.

ಲಕ್ಷಣಗಳು: ಅಧಿಕ ದೇಹದ ಉಷ್ಣತೆ, ನಿರಂತರ ಕೆಮ್ಮು ಮತ್ತು ವಾಸನೆ ಅಥವಾ ರುಚಿಯ ನಷ್ಟ ಈ ರೂಪಾಂತರದಲ್ಲಿ ಹೆಚ್ಚು ಪ್ರಬಲವಾಗಬಹುದು. ಈ ರೂಪಾಂತರದ ಸಾಮಾನ್ಯ ರೋಗಲಕ್ಷಣಗಳು ಹೀಗಿವೆ. ಸುಸ್ತು, ಗಂಟಲು ನೋವು, ತಲೆನೋವು, ಮೈಕೈ ನೋವು, ಅತಿಸಾರ, ಚರ್ಮದ ಮೇಲೆ ದದ್ದು, ಕೆಂಪಾಗುವ ಕಣ್ಣುಗಳು.

ತೀವ್ರದ ರೋಗದ ಲಕ್ಷಣ: ಉಸಿರಾಟದ ತೊಂದರೆ, ನಡೆದಾಡಲು ಸಮಸ್ಯೆ, ಗೊಂದಲ, ಎದೆ ನೋವು.