ಕೊರೊನಾ ಹೊಸ ತಳಿ ಆತಂಕ ಹಿನ್ನೆಲೆ: ಹೆಚ್.ಡಿ ಕೋಟೆಯ ಬಾವಲಿ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ..

kannada t-shirts

ಮೈಸೂರು,ನವೆಂಬರ್,27,2021(www.justkannada.in):  ಕೋವಿಡ್ 2ನೇ ಅಲೆ ಕಡಿಮೆಯಾಗುತ್ತಿದ್ದಂತೆ ಇದೀಗ ಜಗತ್ತಿನಾದ್ಯಂತ ಕೊರೊನಾ ಹೊಸ ತಳಿಯ ಆತಂಕ  ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಹೆಚ್‌.ಡಿ.ಕೋಟೆಯ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತಿದೆ.  ಕೇರಳದಲ್ಲಿ ಇತ್ತಿಚೇಗೆ ನೋರೋ ವೈರಸ್ ಬಗ್ಗೆ ವರದಿಯಾಗಿದ್ದು,  ಈ ಹಿನ್ನೆಲೆಯಲ್ಲಿ ಗಡಿ ಮೂಲಕ ಕರ್ನಾಟಕ ಪ್ರವೇಶಿಸುವವರನ್ನ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ  ನೊರೋ ವೈರಸ್ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ನೋರೋ ವೈರಸ್ ನಿಂದ  ವಾಂತಿ, ಬೇದಿ, ಕಾಣಿಸಿಕೊಳ್ಳುವ ಭೀತಿಯಲ್ಲಿ ತನಿಖೆ. ನಡೆಸಲಾಗುತ್ತಿದೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ”ಟಿ.ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಗಡಿ ಭಾಗದ 28 ಹಳ್ಳಿಗಳಲ್ಲಿ ಆರೋಗ್ಯ ಸಿಬ್ಬಂದಿ ಸಂಚಾರ ಆರಂಭಿಸಿದ್ದಾರೆ.

Key words: Corona- new breed- anxiety -Check –bavali-check post

website developers in mysore