ಮೈಸೂರಿನಲ್ಲಿ ಕಳೆದುಹೋಗಿದ್ದ ಮಾನಸಿಕ ಅಸ್ವಸ್ಥ ವೃದ್ಧನಿಗೆ ಮಕ್ಕಳ ಹುಡುಕುವ ದಾರಿ ತೋರಿಸಿದ ‘ಕೊರೊನಾ ಲಾಕ್ ಡೌನ್’!

ಮೈಸೂರು, ಮೇ 21, 2020 (www.justkannada.in): ದಾರಿ ತಪ್ಪಿ ಬಂದು ಮಾನಸಿಕ ಕಿನ್ನತೆಗೊಳಗಾಗಿ ಮೈಸೂರಿನಲ್ಲಿ ಅಲೆದಾಡುತ್ತಿದ್ದ ವೃದ್ಧನಿಗೆ ಕೊರೊನಾ ಲಾಕ್ ಡೌನ್ ವರದಾನವಾಗಿದೆ.

ಉತ್ತರ ಪ್ರದೇಶ ಮೂಲದ 70 ವರ್ಷದ ಕರಮ್ ಸಿಂಗ್ ನನ್ನು ಲಾಕ್ ಡೌನ್ ವೇಳೆ ನಿರ್ಗತಿಕರ ಕೇಂದ್ರಕ್ಕೆ ಕರೆದೋಗಿ ಆಶ್ರಯ ನೀಡಲಾಗಿತ್ತು. ಮೈಸೂರಿನ ನಂಜರಾಜ ಬಹುದ್ದೂರ್ ನಿರ್ಗತಿಕರ ಆಶ್ರಯ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ನಿರ್ಗತಿಕರ ಕೇಂದ್ರದಲ್ಲಿ ಮನಪರಿವರ್ತನೆ ಚಟುವಟಿಕೆಗಳನ್ನು ಮಾಡಿಸಲಾಗಿತ್ತು.

ಈ ವೇಳೆ ಮಾನಸಿಕ ತಜ್ಞರು ಚಿಕಿತ್ಸೆಗೆ ಸ್ಪಂದಿಸಿದ್ದ ವೃದ್ದ. ಇದೀಗ ವೈದ್ಯರ ಬಳಿ ತನ್ನ ಹಿನ್ನೆಲೆ ಹೇಳಿಕೊಂಡಿದ್ದರು. ಕಳೆದ ಮೂರು ವರ್ಷದ ಹಿಂದೆ ಮಗನ ಮದುವೆಗೆ ಹಣ ಹೊಂದಿಸಲು ಊರಿಂದ ತೆರಳಿದ್ದ. ಈ ವೇಳೆ ತಪ್ಪಾಗಿ ಬೆಂಗಳೂರಿನ ರೈಲು ಹತ್ತಿಕೊಂಡು ಹೇಗೋ ಮೈಸೂರಿಗೆ ತಲುಪಿದ್ದ‌ರು.

ಇದೀಗಾ ಪೊಲೀಸರ ಸಹಾಯದಿಂದ ಮಕ್ಕಳನ್ನು ಸಂಪರ್ಕಿಸಿದ ಪಾಲಿಕೆ ಅಧಿಕಾರಿಗಳು. ಇದೀಗಾ ಮಕ್ಕಳ ಬಳಿಗೆ ತಂದೆಯನ್ನು ಸೇರಿಸುತ್ತಿರು ಕ್ರೆಡಿಟ್ ಐ ಸಂಸ್ಥೆ ಈ ಮೂಲಕ ವೃದ್ಧನಿಗೆ ನೆರವಾಗಿದೆ. ತನ್ನ ತಂದೆ ಬದುಕಿಲ್ಲ ಎಂದುಕೊಂಡಿದ್ದ ಮಕ್ಕಳು. ಇದೀಗ ತಂದೆ ಬದುಕಿರುವ ಸುದ್ದಿ ತಿಳಿದು ಖುಷಿ ಪಟ್ಟಿದ್ದಾರೆ.