ಬಾಯಿ ಮಾತಿಗೆ ಹೇಳಬಾರದು: ಸೋಮವಾರದಿಂದ ಲಾಕ್ ಡೌನ್ ಮಾಡಲೇಬೇಕು- ಹೆಚ್.ವಿಶ್ವನಾಥ್ ಆಗ್ರಹ…

ಮೈಸೂರು,ಮೇ,7,2021(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆಗಾಗಿ ಮೇ 10ರಿಂದ 15 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯಸರ್ಕಾರ ನಿರ್ಧಾರ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ , ಸೋಮವಾರದಿಂದ ಯಡಿಯೂರಪ್ಪ ಲಾಕ್‌ಡೌನ್ ಮಾಡಲೇಬೇಕು. ಬಾಯಿ ಮಾತಿಗೆ ಹೇಳಬಾರದು ಎಂದು ಆಗ್ರಹಿಸಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿದ  ಎಂ.ಎಲ್.ಸಿ ಎಚ್ ವಿಶ್ವನಾಥ್ , ಬೆಳಗಾವಿಯ ಸುವರ್ಣಸೌಧವನ್ನು 2 ಸಾವಿರ ಬೆಡ್‌ನ ಆಸ್ಪತ್ರೆ ಮಾಡಿ. ಊರಿನಿಂದ ಹೊರಗಡೆ ಇದು ತಾತ್ಕಾಲಿಕ ಆಸ್ಪತ್ರೆ ಮಾಡಿ. ವರ್ಷಕ್ಕೆ ಒಮ್ಮೆ ಸದನ ನಡೆಯುತ್ತೇ ಅಲ್ಲಿ. ಅದರ ಬದಲು ಅದನ್ನು ಆಸ್ಪತ್ರೆ ಮಾಡಿ ಜನರಿಗೆ ಒಳ್ಳೆಯದು ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತ.

ಮೈಸೂರಿನಲ್ಲಿ ಕೊರೊ‌ನಾ ಹೆಚ್ಚಾಗುತ್ತಿರುವ ವಿಚಾರ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್,  ಸಚಿವ ಎಸ್ ಟಿ ಸೋಮಶೇಖರ್ ಬರೀ ಅಧಿಕಾರಿಗಳ ಮಾತು ಕೇಳಬೇಡಿ‌. ನೀವೆ ನೇರವಾಗಿ ಆಸ್ಪತ್ರೆಗೆ ಹೋಗಿ ನೋಡಿ. ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತ. ಡಿಎಚ್‌ಓ ಸಹ ಅಸಹಾಯಕರಾಗಿದ್ದಾರೆ. ಕರ್ನಾಟಕದ ಆಡಳಿತದವರಿಗೆ ಗರ ಬಡಿದಿದೆ. ಪಕ್ಕದ ರಾಜ್ಯದವರು ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಸಿಎಂ ಬಿಎಸ್ ವೈ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. …

ನಾವು ಸರ್ಕಾರ ತಂದಿರುವುದಕ್ಕೆ ನೀವು ಎಂ.ಎಲ್.ಸಿ ಮಾಡಿರುವುದು. ಮಾತನಾಡುವ ಯಾರದೂ ತ್ಯಾಗ ಇಲ್ಲ ಯಡಿಯೂರಪ್ಪ ವಿರುದ್ದ ವೈಯಕ್ತಿಕವಾಗಿ ಮಾತನಾಡಿಲ್ಲ. ಶಕ್ತಿಪೀಠದಲ್ಲಿ ಕುಳಿತಿರುವ ಸಿಎಂಗೆ ಮಾತನಾಡಿದೆ. ಶಕ್ತಿಕೇಂದ್ರ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಆ ಶಕ್ತಿ ಕೇಂದ್ರದ ಕಣ್ಣು ಕಿವಿ ಬಗ್ಗೆ ಹೇಳಿದೆ. ಇಬ್ಬರೂ ಡಿಸಿಗೆ ಶಟಪ್ ಅಂತಾ ಹೇಳುವ ಧೈರ್ಯ ಸಿಎಂಗೆ ಇಲ್ಲ ದೂಸ್ರ ಮಾತನಾಡಬೇಡಿ ಅಂತಾ ಹೇಳುವ ಶಕ್ತಿ ಕಳೆದುಕೊಂಡಿದೆ. ಅದನ್ನು ನಾನು ಹೇಳಿದ್ದೇನೆ ಅಷ್ಟೇ. ವಿಧುರನಾಗಿ ಧೃತರಾಷ್ಟ್ರನಿಗೆ ಬುದ್ದಿ ಹೇಳುತ್ತಿದ್ದೇ‌ನೆ. ನಿಮ್ಮನ್ನು ಮೆಚ್ಚಿ ಮಾತನಾಡುವವರನ್ನು,  ಪುತ್ರ ವ್ಯಾಮೋಹ ಬಿಡಿ ಅಂತಾ ಹೇಳುತ್ತಿದ್ದೇನೆ. ಶಕುನಿಗಳ ಮಾತು, ರೈಲು ಹತ್ತಿಸುವವರ ಮಾತು ಕೇಳಬೇಡಿ. ಇದನ್ನು ಹೇಳಿದ್ದು ತಪ್ಪಾ.?. ಎಂದು ಸಿಎಂ ವಿರುದ್ಧ ನೀಡಿದ್ದ ಹೇಳಿಕೆ ಕುರಿತು ಹೆಚ್.ವಿಶ್ವನಾಥ್ ಸ್ಪಷ್ಟನೆ ನೀಡಿದರು.

ಮಠ ಮಾನ್ಯಗಳಿಗೆ ನೂರಾರು ಕೋಟಿ ದೇಣಿಗೆ ನೀಡಿದ್ದೀರಾ:  ವಾಪಸ್ಸು ಸಹಾಯ ಕೇಳಿ

ನನ್ನ ರಾಜಕೀಯ ಚರಿತ್ರೆ ಏನು.? ಅವರ ರಾಜಕೀಯ ಚರಿತ್ರೆ ಏನು.? ಮಠ ಮಾನ್ಯಗಳಿಗೆ ನೂರಾರು ಕೋಟಿ ದೇಣಿಗೆ ನೀಡಿದ್ದೀರಾ. ಅವರನ್ನು ವಾಪಸ್ಸು ಕೇಳಿ, ಏಕೆ ಕೇಳುತ್ತಿಲ್ಲ. ಸರ್ಕಾರದ ಖಜಾನೆಯಿಂದ ಕೊಟ್ಟಿದ್ದೀರಿ. ವಾಪಸ್ಸು ಸಹಾಯ ಕೇಳಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಹೆಚ್.ವಿಶ್ವನಾಥ್ ಆಗ್ರಹಿಸಿದರು.corona -  Lock down -Monday – MLC-H. Vishwanath -demands

ಬಿಬಿಎಂಪಿ ಬೆಡ್ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ವಾ.? ಒಬ್ಬ ಎಂಪಿ ಈ ಹಗರಣವನ್ನು ಬಯಲು ಮಾಡಬೇಕಾಗಿತ್ತಾ.? ಸರ್ಕಾರ ಏನು ಮಾಡುತ್ತಿದೆ. ನಾವು ಸಂಸದ ತೇಜಸ್ವಿ ಸೂರ್ಯರನ್ನು ಅಭಿನಂದಿಸಬೇಕು. ಇದಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಈ ಕೆಲಸ ಮಾಡಬಾರದು, ತೇಜಸ್ವಿ ಸೂರ್ಯ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದರು.

Key words: corona –  Lock down -Monday – MLC-H. Vishwanath -demands