ಕೊರೋನಾ: ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಭಾರತ…

ನವದೆಹಲಿ, ಸೆಪ್ಟೆಂಬರ್,2020(www.justkannada.in):  ದೇಶದಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಅಬ್ಬರಿಸುತ್ತಿದ್ದು ಇದೀಗ ವಿಶ್ವದಲ್ಲಿ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಬ್ರೆಜಿಲ್ ಅನ್ನ ಹಿಂದಿಕ್ಕಿ ಭಾರತ 2ನೇ ಸ್ಥಾನಕ್ಕೇರಿದೆ.jk-logo-justkannada-logo

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 90,802 ಮಂದಿಗೆ ಕೊರೋನಾ ಸೋಂಕು ತಗುಲಿದ್ದು  ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 42,04,614ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿಗೆ 1016 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಇದುವರೆಗೂ 71,642 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.corona-india-2nd-ranked-world

ದೇಶದ ಒಟ್ಟು 42,04,614 ಸೋಂಕಿತರ ಪೈಕಿ  8,82,542 ಸಕ್ರಿಯ ಪ್ರಕರಣಗಳಿದ್ದು ಇದುವರೆಗೂ 32,50,429  ಮಂದಿ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಸೋಂಕಿತರ ಪಟ್ಟಯಲ್ಲಿ ಭಾರತವು ಬ್ರೆಜಿಲ್‌ ಅನ್ನೂ ಹಿಂದಿಕ್ಕಿ, ಜಗತ್ತಿನ ಹಾಟ್‌ ಸ್ಪಾಟ್‌ ದೇಶಗಳ ಪೈಕಿ ಎರಡನೇ ಸ್ಥಾನಕ್ಕೇರಿದೆ. ಅಮೇರಿಕಾ 64,60,250 ಮಂದಿ ಕೊರೋನಾ ಸೋಂಕಿತರಿದ್ದು ಮೊದಲ ಸ್ಥಾನದಲ್ಲಿದೆ.

Key words: Corona- India-2nd  – ranked-world