ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ: ಒಂದೇ ದಿನದಲ್ಲಿ 12,847 ಕೋವಿಡ್ ಕೇಸ್ ಪತ್ತೆ.

ನವದೆಹಲಿ, ಜೂನ್,17,2022(www.justkannada.in):  ದೇಶದಲ್ಲಿ   ದಿನೇ ದಿನೇ ಕೊರೊನಾ ಸೋಂಕಿತರ  ಸಂಖ್ಯೆ ಹೆಚ್ಚಳವಾಗುತ್ತಿದ್ದು.  ಈ ಮಧ್ಯೆ ಕಳೆದ 24 ಗಂಟೆಯಲ್ಲಿ ಹೊಸದಾಗಿ  12,847  ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ 14  ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ  ಮೃತಪಟ್ಟವರ ಸಂಖ್ಯೆ 5,24,817ಕ್ಕೆ ಏರಿಕೆಯಾಗಿದೆ.over-4-lakh-covid-positive-cases-detected-single-day-country

ಇನ್ನು ದೇಶದಲ್ಲಿ 63,063 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 7,985 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,26,74,712 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ನಿನ್ನೆ 15,27,365 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

Key words: Corona-increasing – country-12,847- Covid case