ಕೊರೋನಾ ಹೆಚ್ಚಳ ಹಿನ್ನೆಲೆ: ನಾಳೆ ಸಂಜೆ ಸರ್ವಪಕ್ಷ ಸಭೆ…

ಬೆಂಗಳೂರು,ಏಪ್ರಿಲ್,19,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದನ್ನ ತಡೆಗಟ್ಟುವ ಕುರಿತು ಚರ್ಚಿಸಲು ನಾಳೆ ಸಂಜೆ ಸರ್ವಪಕ್ಷ ನಾಯಕರ ಸಭೆ ಕರೆಯಲಾಗಿದೆ.

ನಾಳೆ ಸಂಜೆ 4.30ಕ್ಕೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವಪಕ್ಷ ನಾಯಕರ ಸಭೆ ನಡೆಯಲಿದೆ.  ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವರ್ಚೂವಲ್ ಮೂಲಕ ಪಾಲ್ಗೊಳ್ಳಲಿದ್ದು ವಿಪಕ್ಷ ನಾಯಕರ ಜತೆ ಚರ್ಚೆ  ನಡೆಸಲಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ, ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಬಗ್ಗೆ ಸರ್ವ ಪಕ್ಷ ನಾಯಕರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸೇರಿ ಹಲವು ನಾಯಕರು ಭಾಗವಹಿಸುವ ಸಾಧ್ಯತೆ ಇದೆ.

ENGLISH SUMMARY…

All party meeting tomorrow evening to discuss about Corona prevention
Bengaluru, Apr. 19, 2021 (www.justkannada.in): The State Government has called for an all-party meeting tomorrow to discuss about the Corona situation in the state.
The meeting will be held through video conferencing, in the leadership of the Governor, at 4.30 pm. Chief Minister B.S. Yedyurappa will join the meeting virtually. He will be discussing about implementing tough rules and other things to control the COVID-19 Pandemic. Leader of opposition in the Assembly and former Chief Minister Siddaramaiah, former Chief Minister H.D. Kumaraswamy, KPCC President D.K. Shivakumar and several other leaders will take part in the meeting.corona-increase-all-party-meeting-governor-tomorrow-evening
Keywords: All-party virtual meeting/ tomorrow/ to discuss about COVID-19 Pandemic/ Corona/ State Government/ Chief Minister B.S. yedyurappa

Key words: Corona –increase- all-party- meeting – governor- tomorrow- evening.