ಕೊರೋನಾ ಭೀತಿ : 100 ದಿನಗಳ ಕಾಲ ರಜೆ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಪೊಲೀಸ್ ಪೇದೆ….

kannada t-shirts

ಕೋಲಾರ,ಮಾ,14,2020(www.justkannada.in):  ರಾಜ್ಯದಲ್ಲಿ ಕೊರೋನಾ ವೈರಸ್  ತಡೆಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವನ್ನ ಕೈಗೊಂಡಿದೆ. ಈ ನಡುವೆ ಕೊರೋನಾ ವೈರಸ್ ಭೀತಿಯಿಂದ  ಪೊಲೀಸ್ ಪೇದೆಯೊಬ್ಬರು ತಮಗೆ 100 ದಿನಗಳ ಕಾಲ ರಜೆ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ಸಂಗಲಿ ಪೊಲೀಸ್ ಠಾಣೆಯ ಪೇದೆ ಪ್ರಶಾಂತ್ ಪತ್ರ ಬರೆದಿದ್ದಾರೆ.  ನಮ್ಮ ಅಪ್ಪ-ಅಮ್ಮನಿಗೆ ಇರೋದೇ ನಾನ್ ಒಬ್ಬನೇ ಮಗ. ಕೊರೊನಾ ವೈರಸ್ ಸೋಂಕಿನ ಭೀತಿ ಹುಟ್ಟಿಕೊಂಡು ಬಿಟ್ಟಿದೆ. ನನಗೆ ಏನಾದರೂ ಆದ್ರೆ ನಮ್ಮ ತಂದೆ ತಾಯಿ ಆತಂಕ ಪಡುತ್ತಾರೆ. ಹೀಗಾಗಿ ನನಗೆ 100 ದಿನಗಳ ಕಾಲ ರಜೆ ನೀಡಿ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಪೇದೆ ಪ್ರಶಾಂತ್ ಪತ್ರ ಬರೆದಿದ್ದಾರೆ.

ಈ ಪತ್ರ ಬರೆಯುವ ಉದ್ದೇಶವೇನೆಂದರೇ ನನ್ನ ತಾಯಿ ತಂದೆಗೆ ನಾನು ಒಬ್ಬನೇ ಮಗನಾಗಿದ್ದು, ಅವರ ಭಯವೇನೆಂದರೆ ಈ ಒಂದು ರಾಕ್ಷಸಿ ಕೊರೋನಾ ವೈರಸ್ ನಮ್ಮ ಮಗನಿಗೆ ಹರಡುತ್ತದೆಯೋ ಎಂದು ಅವರು ಭಯ ಬೀಳುತ್ತಿದ್ದಾರೆ. ಈ ಒಂದು ಕಾರಣದಿಂದಾಗಿ ನನಗೆ ನೂರು ಹಾಗೂ ನೂರಕ್ಕಿಂತ ಹೆಚ್ಚು ದಿನಗಳ ಕಾಲ ರಜೆಯನ್ನು ಘೋಷಿಸಲು ತಮ್ಮಲ್ಲಿ ಇಚ್ಛಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪ್ರಶಾಂತ್ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Key words: corona –fear-police- letter – DG&IGP-100 days-leave

website developers in mysore