ಕೊರೋನಾ ಎಫೆಕ್ಟ್: ಸಾಲ ಮರುಪಾವತಿಗೆ ವಿನಾಯಿತಿ ನೀಡುವಂತೆ ಸಿಎಂಗೆ ಟ್ಯಾಕ್ಸಿ ಚಾಲಕರ ಮೊರೆ….

Promotion

ಮೈಸೂರು,ಮಾ,16,2020(www.justkannada.in):  ಕೊರೋನಾ ಎಫೆಕ್ಟ್  ಎಲ್ಲಾ ಕ್ಷೇತ್ರಗಳಿಗೂ ತಟ್ಟಿದ್ದು ಈ ನಡುವೆ ಪ್ರವಾಸೋದ್ಯಮಕ್ಕೆ ಭಾರಿ ಹೊಡೆದ ಬಿದ್ದಿದೆ. ಹೀಗಾಗಿ ಸಾಲ ಮರುಪಾವತಿಗೆ ವಿನಾಯಿತಿ ನೀಡುವಂತೆ ಟ್ಯಾಕ್ಸಿ ಚಾಲಕರ  ಮುಖ್ಯಮಂತ್ರಿಗಳ ಮೊರೆ ಹೋಗಿದ್ದಾರೆ.

ಕರೊನಾ ವೈರಸ್ ಭೀತಿ ಹಿನ್ನೆಲೆ, ಪ್ರವಾಸೋದ್ಯಮ ಸಂಪೂರ್ಣ ಕುಸಿದಿದೆ. ಹೀಗಾಗಿ ಸಾಲ ಮರುಪಾವತಿಗೆ ವಿನಾಯಿತಿ ನೀಡುವಂತೆ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಟ್ಯಾಕ್ಸಿ  ಚಾಲಕರು ಪತ್ರ ಬರೆದಿದ್ದಾರೆ.

ಕಾರು ಖರೀದಿಗಾಗಿ ಬ್ಯಾಂಕ್, ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸಾಲ ಮಾಡಿದ್ದೇವೆ. ನಿಗದಿತ ಅವಧಿಯೊಳಗೆ ಮರುಪಾವತಿ ಮಾಡದೇ ಇದ್ದರೆ ವಾಹನ ಸೀಜ್  ಮಾಡ್ತಾರೆ. ನಾವು ಸಾಲ ಕಟ್ಟಲು ರೆಡಿ ಇದ್ದೇವೆ.ಆದ್ರೆ ಬ್ಯುಸ್​ನೆಸ್​ ಇಲ್ಲದ ಕಾರಣ ಹಣವಿಲ್ಲ. ಎರಡು- ಮೂರು ತಿಂಗಳು ವಿನಾಯಿತಿ ನೀಡಿದರೆ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ  ಟ್ಯಾಕ್ಸಿ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Key words: Corona- Effect-taxi drivers – CM -exempt – loan repayment.