ಕೊರೊನಾ ಎಫೆಕ್ಟ್ : ಮಾರ್ಚ್ 31ರವರೆಗೆ ಪಿವಿಆರ್​​ ಚಿತ್ರ ಮಂದಿರ ಬಂದ್ !

kannada t-shirts

ನವದೆಹಲಿ, ಮಾರ್ಚ್ 13, 2020 (www.justkannada.in): ರಾಜ್ಯ ಸರ್ಕಾರಗಳ ಸಲಹೆಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ, ಕೇರಳ ಹಾಗೂ ದೆಹಲಿಯಲ್ಲಿರುವ ಪಿವಿಆರ್​​ ಚಿತ್ರ ಮಂದಿರಗಳನ್ನು ಮಾರ್ಚ್​​ 31ರವರೆಗೆ ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಪಿವಿಆರ್​​ ಮುಖ್ಯಸ್ಥರು ಅಧಿಕೃತವಾಗಿ ಟ್ವೀಟ್​​ ಮೂಲಕ ತಿಳಿಸಿದ್ದು, ಕೇರಳ, ದೆಹಲಿ, ಜಮ್ಮ ಮತ್ತು ಕಾಶ್ಮೀರ ಸರ್ಕಾರದ ಸಲಹೆಯ ಮೇರೆಗೆ ನಮ್ಮ ಪಿವಿಆರ್​​ ಸಿನಿಮಾವನ್ನು ಮಾರ್ಚ್​​ 31ರವರೆಗೆ ಸ್ಥಗಿತಗೊಳಿಸುತ್ತೇವೆ. ಕೋವಿಡ್​​ 19 ಭೀತಿ ಇರುವುದಿಂದ ಸರ್ಕಾರದ ಮನವಿಗೆ ನಾವು ಸ್ಪಂದಿಸುತ್ತೇವೆ ಎಂದು ಹೇಳಿದ್ದಾರೆ.

ಪಿವಿಆರ್​​ ಸಿನಿಮಾಕ್ಕೆ ಬರುವ ಪ್ರೇಕ್ಷಕರ ಕಾಳಜಿಯನ್ನು ಮತ್ತು ಸರ್ಕಾದ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಪಿವಿಆರ್​​ ತಿಳಿಸಿದೆ. ಅಲ್ಲದೆ ಮುಂದಿನ ಏಪ್ರಿಲ್​ 1ರಿಂದ ಸಿನಿಮಾಗಳನ್ನು ಪ್ರದರ್ಶನ ಮಾಡುವುದಾಗಿಯೂ ತಿಳಿಸಲಾಗಿದೆ.

website developers in mysore