ಕೊರೋನಾ ರುದ್ರತಾಂಡವ: 24 ಗಂಟೆಗಳಲ್ಲಿ 2,700 ಮಂದಿ ಬಲಿ

ವಾಷಿಂಗ್ಟನ್, ಏಪ್ರಿಲ್ 22, 2020 (www.justkannada.in):ಅಮೆರಿಕಾದಲ್ಲಿ ಕೊರೋನಾ ತನ್ನ ರುದ್ರತಾಂಡವವನ್ನು ಮುಂದುವರೆಸಿದ್ದು, 24 ಗಂಟೆಗಳಲ್ಲಿ 2,700 ಮಂದಿಯನ್ನು ಬಲಿ ಪಡೆದುಕೊಂಡಿದೆ.

ಕೊರೋನಾ ಮಹಾಮಾರಿಗೆ ಈ ವರೆಗೂ ಅಮೆರಿಕಾದಲ್ಲಿ 45, 039 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 8,24,438ಕ್ಕೆ ಏರಿಕೆಯಾಗಿದೆ.

ಅಮೆರಿಕಾದ ನ್ಯೂಯಾರ್ಕ್ ನಗರ ಅತ್ಯಂತ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದು, ಈ ನಗರವೊಂದರಲ್ಲಿಯೇ ಒಂದೇ ದಿನ 481 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ಈ ಮಟ್ಟದಲ್ಲಿ ಸಾವುಗಳು ಸಂಭವಿಸುತ್ತಿದ್ದರೂ, ಅಲ್ಲಿನ ಆರೋಗ್ಯಾಧಿಕಾರಿಗಳು ಮಾತ್ರ ಲಾಕ್’ಡೌನ್ ಪರಿಣಾಮಕಾರಿಯಾಗಿರದ ಕಾರಣದಿಂದಲೇ ಸಾವು ಸಂಭವಿಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.