ವಿಧಾನಸೌಧದ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆ…

Promotion

ಬೆಂಗಳೂರು,ಜೂ,20,2020(www.justkannada.in):  ಮಹಾಮಾರಿ ಕೊರೋನಾ ಭೀತಿ ಇದೀಗ ವಿಧಾನಸೌಧಕ್ಕೂ ಎದುರಾಗಿದೆ. ಹೌದು, ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ವಿಧಾನಸೌಧದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಕಳೆದ 6 ದಿನಗಳಿಂದ ರಜೆ ಮೇಲಿದ್ದರು ಎನ್ನಲಾಗಿದೆ. ಈಗ ಇವರಿಗೆ ಮತ್ತು ಇವರ ಪತ್ನಿಗೂ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.Corona -detection –vidhana soudha-staff.

ಕಳೆದ ಸಚಿವ ಸಂಪುಟ ಸಭೆಯ ನಂತರ ಸಚಿವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಸೋಂಕಿತ ಸಿಬ್ಬಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಹೀಗಾಗಿ ಅಂದು ಭಾಗಿಯಾಗಿದ್ದ ಎಲ್ಲರಿಗೂ ಕೊರೋನಾ ಆತಂಕ ಶುರುವಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನ ಪತ್ತೆ ಕಾರ್ಯ ನಡೆಸಲಾಗುತ್ತಿದೆ.

Key words: Corona -detection –vidhana soudha-staff.