ದೇಶದಲ್ಲಿ ಕೊರೋನಾ ಪ್ರಕರಣ ಮತ್ತೆ ಏರಿಕೆ: ಒಂದೇ ದಿನದಲ್ಲಿ 41,195 ಮಂದಿಗೆ ಕೋವಿಡ್ ಸೋಂಕು.

ನವದೆಹಲಿ,ಆಗಸ್ಟ್,12,2021(www.justkannada.in):  ದೇಶದಲ್ಲಿ ಕೊರೋನಾ ಸೋಂಕಿನ  ಪ್ರಕರಣ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 41,195 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು  ಪತ್ತೆಯಾಗಿದೆ.

 ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು,  ಕಳೆದ 24 ಗಂಟೆಗಳಲ್ಲಿ 41,195 ಮಂದಿಗೆ ಹೊಸದಾಗಿ ಕೊರೊನಾ ವೈರಸ್  ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 32,077,706 ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ  ದೇಶದಲ್ಲಿ 490 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ, ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,29,669 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 387,987 ಕ್ಕೆ ಇಳಿದಿದೆ ಮತ್ತು ಈಗ ಒಟ್ಟು ಕೇಸ್ ಲೋಡ್ ನ ಶೇಕಡಾ 1.21 ರಷ್ಟನ್ನು ಒಳಗೊಂಡಿದೆ. ಗುರುವಾರದ ವರೆಗೆ 31,260,050 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Key words: Corona case – rise –again-single day.