ಕೊರೋನಾ ಪ್ರಕರಣ ಮತ್ತೆ ಏರಿಕೆ ಹಿನ್ನೆಲೆ : ಸಭೆ, ಸಮಾರಂಭ, ಮದುವೆಗಳಲ್ಲಿ ನಿರ್ಬಂಧಕ್ಕೆ ಕೇಂದ್ರ ಸರ್ಕಾರ ಸೂಚನೆ.

Promotion

ಬೆಂಗಳೂರು,ಡಿಸೆಂಬರ್,11,2021(www.justkannada.in):  ದೇಶದಲ್ಲಿ ಕೊರೋನಾ ಪ್ರಕರಣ ಮತ್ತೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಭೆ, ಸಮಾರಂಭ, ಮದುವೆಗಳಲ್ಲಿ ನಿರ್ಬಂಧ ವಿಧಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರಬರೆದು ಸೂಚನೆ ನೀಡಿದೆ.

ಈ ಕುರಿತು ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯಕರ್ಶಿ ರಾಜೇಶ್‌ ಭೂಷಣ್‌ ಪತ್ರ, ದೇಶದಲ್ಲಿ ಕಳೆದ 2 ವಾರಗಳಲ್ಲಿ ಕೋವಿಡ್‌ ಪಾಸಿಟಿವಿಟಿ ಹೆಚ್ಚಳದ ಹಿನ್ನೆಲೆಯಲ್ಲಿ ಕೊರೊನಾ ಕಟ್ಟಿ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಕೋವಿಡ್‌ ಕ್ಲಸ್ಟರ್‌ ಗಳ ಪ್ರದೇಶಗಳಲ್ಲಿ ಕಾರ್ಯ ತಂತ್ರಗಳನ್ನ ಅನುಸರಿಸುವಂತೆ ಸೂಚಿಸಿರುವ ಅವರು, ನೈಟ್‌ ಕರ್ಫ್ಯೂ, ಜನಜಂಗುಳಿ ನಿರ್ಬಂಧಿಸುವಂತೆ ತಿಳಿಸಿದ್ದಾರೆ.  ಹಾಗೆಯೇ ಸಭೆ, ಅಂತ್ಯಕ್ರಿಯೆ, ಮದುವೆಗಳಲ್ಲಿ ನಿರ್ಬಂಧ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನ ಕಟ್ಟುನಿಟ್ಟಾಗಿ ಜಾರಿ ಮಾಡಿ ಎಂದು ತಿಳಿಸಿದ್ದಾರೆ.

Key words:  Corona case – rise –again-Central government- notice