ಕಠಿಣ ಲಾಕ್ ಡೌನ್ ನಿಂದ ಬೆಂಗಳೂರಿನಲ್ಲಿ ಕೊರೋನಾ ಕೇಸ್ ಇಳಿಕೆ- ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ವಿವರಣೆ..

ಬೆಂಗಳೂರು,ಮೇ,18,2021(www.justkannada.in): ಕಠಿಣ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಇಳಿಕೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.jk

ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಪ್ರಧಾನಿ ನರೇಂದ್ರ ಮೊದಿ ನಡೆಸುತ್ತಿರುವ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಬೆಂಗಳೂರಿನ ಕೊರೋನಾ ನಿರ್ವಹಣೆ ಸ್ಥಿತಿಗತಿ ಬಗ್ಗೆ ವಿವರ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಲಾಕ್ ಡೌನ್ ಜಾರಿಯಾಗಿದ್ದರಿಂದ ಬೆಂಗಳೂರಿನಲ್ಲಿ ಸೋಂಕು ಇಳಿಕೆಯಾಗಿದೆ. ಲಾಕ್ ಡೌನ್ ಗೂ ಮೊದಲು ಪ್ರತಿನಿತ್ಯ 26 ಸಾವಿರ ಬರುತ್ತಿದ್ದ ಕೇಸ್ ಗಳು ಲಾಕ್ ಡೌನ್ ಬಳಿಕ 10 ಸಾವಿರಕ್ಕೆ ಇಳಿಕೆಯಾಗಿದೆ . ಕೊರೋನಾ ನಿಗ್ರಹಿಸಲು ಎಲ್ಲಾ ರೀತಿ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.corona-case-declines-bangalore-tough-lockdown-bbmp-chief-commissioner-gaurav-gupta-pm-modi

ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ.   ಟೀಂ ಮಾಡಿ ಐಸೋಲೇಶಷನ್ ಮಾಡುವ ಕೆಲಸವಾಗುತ್ತಿದೆ. ಹೆಲ್ತ್ ಸೆಂಟರ್ ಗಳಿಂದಲೇ ಮಾನಿಟರ್ ಮಾಡಲಾಗುತ್ತಿದೆ. ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಹೋಂ ಐಸೋಲೇಷನ್ ಮಾನಿಟರ್ ಮಾಡಲಾಗುತ್ತಿದೆ. ಎಲ್ಲಾ ಜೋನ್ ಗಳಲ್ಲಿ ವಾರ್ ರೂಂ ತೆರೆದಿದ್ದೇವೆ ಎಂದು ಗೌರವ್ ಗುಪ್ತ ಮಾಹಿತಿ ನೀಡಿದರು.

Key words: Corona case -declines – Bangalore – tough- lockdown- BBMP -Chief Commissioner -Gaurav Gupta-pm modi