ದೇಶದಲ್ಲಿ ಇಳಿಕೆಯತ್ತ ಕೊರೋನಾ ಪ್ರಕರಣ:  ಒಂದೇ ದಿನ ಹೊಸದಾಗಿ 19,078 ಮಂದಿಯಲ್ಲಿ ಸೋಂಕು ಪತ್ತೆ…

kannada t-shirts

ನವದೆಹಲಿ,ಜನವರಿ,2,2020(www.justkannada.in):  ದೇಶದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ  ಇಳಿಕೆಯಾಗುತ್ತಿದ್ದು ದೇಶದಲ್ಲಿ ಕಳೆದ 24 ಗಂಟೆತಲ್ಲಿ  19,078 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.jk-logo-justkannada-mysore

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,03,05,788ಕ್ಕೆ ಏರಿಕೆಯಾಗಿದೆ.  ಕಳೆದ 24 ಗಂಟೆಗಳಲ್ಲಿ 224 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,49,218ಕ್ಕೆ ತಲುಪಿದೆ.corona-case-decline-country-19078-new-infections-detected-single-day

ಇನ್ನು 1,03,05,788 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 22,926 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ವರೆಗೂ ಗುಣಮುಖರಾದವರ ಸಂಖ್ಯೆ 99,06,387ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರಿಗಿಂತ  ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ 2,50,183ಕ್ಕೆ ಇಳಿಕೆಯಾಗಿದೆ.

Key words: Corona case -decline – country-19,078 -new infections – detected -single day.

website developers in mysore