ಕೊರೋನಾ ಜಾಗೃತಿ ಅಭಿಯಾನ : ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ ಕೆಎಸ್ ಒಯು ಕುಲಪತಿ  ಡಾ.ವಿದ್ಯಾಶಂಕರ್…

ಮೈಸೂರು,ಏಪ್ರಿಲ್,29,2021(www.justkannada.in): ಕೊರೋನಾ ತಡೆಗಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್ ಡೌನ್  ಜಾರಿ ಮಾಡಿದ್ದು ಇಂದು  ಲಾಕ್ ಡೌನ್ 2ನೇ ದಿನವಾಗಿದೆ.  ಇಂದು ಕೂಡ ಆಗತ್ಯ ವಸ್ತುಗಳ ಖರೀದಿಗೆ  ಬೆಳ್ಳಗ್ಗೆ 6 ರಿಂದ 10 ವರಗೆ ಮಾತ್ರ ಅವಕಾಶ ನೀಡಲಾಗಿದೆ.jk

ಈ ಮಧ್ಯೆ ನಗರ ಎಂ ಜಿ ರಸ್ತೆಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡುವ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ.ವಿದ್ಯಾಶಂಕರ್ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದರು.

ಕೆಎಸ್ ಒಯು ಕುಲಪತಿ ಡಾ.ವಿದ್ಯಾಶಂಕರ್ .ಎಸ್ ಅವರು ಕೊರೊನ ಜಾಗೃತಿ ಅಭಿಯಾನ ಮತ್ತು ಅರಿವು ಮೂಡಿಸುವ ಸಲುವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಹಿಂಭಾಗದಲ್ಲಿರುವ ತರಕಾರಿ ಮಂಡಿಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ & ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರ ಎಂ ಜಿ ರಸ್ತೆಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಜನರಿಗೆ  ಕೊರೊನ ಬಗ್ಗೆ ಜಾಗೃತಿ ‌‌ಮೂಡಿಸಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು.corona-awareness-ksou-vc-dr-vidyashankar-distributed-mask-sanitizer-mysore

ಈ ವೇಳೆ ಅಲ್ಲಿ ನೆರೆದಿದ್ದ ಜನರ ಮಧ್ಯೆ ಮಂಗಳಮುಖಿಯರಿಗೂ ಸಹ ಕುಲಪತಿ ಡಾ. ವಿದ್ಯಾಶಂಕರ್  ಅವರು ಮಾಸ್ಕ್ ಹಾಗೂ ಸ್ಯಾನಿಟೈಸ್ ವಿತರಿಸಿದರು.

ಈ ವೇಳೆ ಕೆಎಸ್ ಒಯು ರಿಜಿಸ್ಟ್ರಾರ್ ಎ.ಖಾದರ್ ಪಾಷಾ, ಪರೀಕ್ಷಾಂಗ ಕುಲಸಚಿವ ಪ್ರೊ. ಮಹದೇವನ್, ಡೀನ್ ಗಳಾದ ಡಾ.ಅಶೋಕ್ ಕಾಂಬ್ಳೆ, ಡಾ. ಷಣ್ಮುಖ, ಸಹಾಯಕ ಕಾರ್ಯಪಾಲಕ ಅಭಿಯಂತರು ಭಾಸ್ಕರ್, ಉಪಕುಲಸಚಿವ ಚಂದ್ರೇಶ್, ಕುಲಪತಿ ವಿಶೇಷ ಕರ್ತವ್ಯಾಧಿಕಾರಿ ಪ್ರೊ. ದೇವರಾಜ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಳ್ಳಿ ಸತ್ಯನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

ENGLISH SUMMARY….

Corona awareness campaign: KSOU VC Dr. Vidyashankar distributes masks, sanitizers to public
Mysuru, Apr. 29, 2021 (www.justkannada.in): The State Government has imposed 14 days close down across the state as a measure to break the second wave of the COVID-19 Pandemic chain. Today is the second day of the closedown (Janata Curfew). Opportunity is given to buy essential goods from 6.00 am to 10.00 am on all the closedown days.
As an attempt to create awareness among the people about prevention and precautionary measures to be followed, Dr. Vidyashankar, Vice-Chancellor, Karnataka State Open University, Mysuru, today distributed masks and sanitizers to the people at the vegetable market on M.G. Road, in Mysuru.
A. Khadar Pasha, Registrar, KSOU, Prof. Mahadevan, Registrar (Examinations), KSOU, Deans Dr. Ashok Kamble, Dr. Shanmukha, Assistant Executive Engineer Bhaskar, Deputy Registrar Chandresh, Special Officer to the VC Prof. Devraj, Competitive Exams Training Centre Coordinating Officer Jainahalli Satyanarayanagowda and others accompanied him.corona-awareness-ksou-vc-dr-vidyashankar-distributed-mask-sanitizer-mysore
Keywords: KSOU/ Vice-Chancellor/ Dr. Vidyashankar/ visits vegetable market/ M.G. Road, Mysuru/ distributes masks and sanitizers/ awareness on COVID-19 Pandemic

Key words: Corona –Awareness- KSOU –VC-Dr. Vidyashankar -distributed – Mask –Sanitizer-Mysore