ಕೊರೊನಾ ಆತಂಕ: ನೀಟ್, ಜೆಇಇ ಸೇರಿದಂತೆ ಎಲ್ಲ ಪರೀಕ್ಷೆ ಮುಂದೂಡಿ ಆದೇಶ

Promotion

ಬೆಂಗಳೂರು, ಏಪ್ರಿಲ್ 25, 2021 (www.justkannada.in): ಕೊರೋನಾ ಎರಡನೇ ಅಲೆಯ ಕಾರಣ ನೀಟ್, ಜೆಇಇ ಸೇರಿದಂತೆ ಇತರೆ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಮತ್ತೆ ಯಾವಾಗ ಪರೀಕ್ಷೆ ನಡೆಸಲಾಗುತ್ತದೆ ಎಂಬ ಮಾಹಿತಿ ಇಲ್ಲ. ಶೀಘ್ರವೇ ಪರೀಕ್ಷೆಯ ಹೊಸ ದಿನಾಂಕವನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುವಂತೆ ವಿದ್ಯಾರ್ಥಿಗಳು ಕೋರಿದ್ದಾರೆ.

ನೀಟ್ (ಸ್ನಾತಕೋತ್ತರ ಪದವಿ) 2021: ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆಸುವ ನೀಟ್ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

ಈ ಪರೀಕ್ಷೆಯನ್ನು ಏಪ್ರಿಲ್ 18ರಂದು ಆಯೋಜಿಸಲಾಗಿತ್ತು. ಆದರೆ ಕೋವಿಡ್ ಕಾರಣ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ. ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ಏಪ್ರಿಲ್ 15ರಂದೇ https://natboard.edu.in/ ವೆಬ್‍ಸೈಟ್‍ನಲ್ಲಿ ಸೂಚಿಸಲಾಗಿದೆ.