ಬಂಧಿತ ಆರೋಪಿಗೆ ಕೊರೋನಾ ಸೋಂಕು: ಬೆಂಗಳೂರಿನ ಸಿಸಿಬಿ ಕಚೇರಿ ಸೀಲ್ ಡೌನ್…

kannada t-shirts

ಬೆಂಗಳೂರು,ಜೂ,12,2020(www.justkannada.in):  ಬಂಧಿತ ಆರೋಪಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಬೆಂಗಳೂರಿನ ಸಿಸಿಬಿ ಕಚೇರಿಯನ್ನ ಬಿಬಿಎಂಪಿ ಸೀಲ್ ಡೌನ್ ಮಾಡಿದೆ.

ಖಾಸಗಿ ಕಂಪನಿಗೆ ವಂಚನೆ ಮಾಡಿದ ಆರೋಪದಡಿ ಮೂವರು ಸಹಚರರ ಜತೆ ಕೊರೋನಾ ಸೋಂಕಿತ ಆರೋಪಿಯನ್ನ ಬಂಧಿಸಲಾಗಿತ್ತು. ಈ ನಡುವೆ ಕೊರೋನಾ ಟೆಸ್ಟ್ ನಲ್ಲಿ ಓರ್ವ ಆರೋಪಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು, ಹೀಗಾಗಿ ಸಿಸಿಬಿ ಕಚೇರಿಗೆ ಸ್ಯಾನಿಟೈಸ್ ಮಾಡಿ ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಇತಿಹಾಸದಲ್ಲಿ ಇದೇ ಮೊದಲಿಗೆ ಸಿಸಿಬಿ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ.Corona – accused-CCB Office -Seal Down- Bangalore.

ಹಾಗೆಯೇ ಸೋಂಕಿತ ಆರೋಪಿಯನ್ನ ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಇಬ್ಬರು ಇನ್ಸ್ ಪೆಕ್ಟರ್  ಹಾಗೂ 7 ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಬಂಧಿತ ಆರೋಪಿಯ ದ್ವಿತೀಯ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಗಂಟಲು ದ್ರವ ಸಂಗ್ರಹಿಸಿ  ಕೊರೋನಾ ಟೆಸ್ಟ್ ಕಳಿಸಲಾಗುತ್ತಿದೆ.

Key words: Corona – accused-CCB Office -Seal Down- Bangalore.

website developers in mysore