ಸಿರಿಧಾನ್ಯ ಬೆಳೆಯಲು ನಮ್ಮ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಜನವರಿ,20,2023(www.justkannada.in) ಕೃಷಿ ಇಲಾಖೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಸಾವಯವ ಮೇಳ- 2023 ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಅಂತರಾಷ್ಟ್ರೀಯ  ಸಿರಿಧಾನ್ಯ ಮೇಳದಲ್ಲಿ ದೇಶ ವಿದೇಶಗಳ ಸಿರಿಧಾನ್ಯ ಕಂಪನಿಗಳು ಭಾಗಿಗಳು ಭಾಗಿಯಾಗುತ್ತಿವೆ. ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿರಿದಾನ್ಯ ಬೆಳೆಯಲು ನಮ್ಮ ಸರ್ಕಾರ  ಎಲ್ಲಾ ರೀತಿ ಸಹಕಾರ ನೀಡುತ್ತಿದೆ. ಕಳೆದ 3 ವರ್ಷದಿಂದ ಅಕ್ಕಿ ಜೊತೆ ರಾಗಿ, ಜೋಳ ವಿತರಿಸುತ್ತಿದ್ದೇವೆ.  ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಕ್ಕೆ  ಬಹಳ ಬೇಡಿಕೆ ಇದೆ. ಸಿರಿಧಾನ್ಯ ಬೆಳೆ ವಿಸ್ತರಣೆಗೆ ಕೇಂದ್ರದಿಂದ ಅನುದಾನ ಸಿಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಡಕೆ ಬೆಳೆ ಹೆಚ್ಚಾಗಿದೆ.  ಇದರ ನಡುವೆ ಬೇರೆ ಬೇರೆ ಬೆಳೆಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.

ಈ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿಸಿ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.

Key words: cooperation – government – grow- sorghum- CM -Basavaraja Bommai.