ರಾಜೀವ್ ಗಾಂಧಿ ಬಗ್ಗೆ ವಿವಾದಾತ್ಮಕ ಟ್ವಿಟ್- ಕ್ಷಮೆಕೋರಿದ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್…

kannada t-shirts

ದಕ್ಷಿಣ ಕನ್ನಡ,ಮೇ,17,2019(www.justkannada.in): ಮಾಜಿ ಪ್ರಧಾನಿ  ರಾಜೀವ್ ಗಾಂಧಿ ಬಗ್ಗೆ ಮಾಡಿದ್ದ ಟ್ವಿಟ್ ಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆ ಟ್ವಿಟ್ ಡಿಲೀಟ್ ಮಾಡಿದ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಈ ಬಗ್ಗೆ ಕ್ಷಮೆ ಕೇಳಿದ್ದಾರೆ.

ಮಾಜಿ ಪ್ರಧಾನಿ 17 ಸಾವಿರ ಜನರನ್ನ ಕೊಂದಿದ್ದರು. ನಾಥುರಾಮ್‌ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್‌ ಕಸಬ್‌ ಕೊಂದವರ ಸಂಖ್ಯೆ 72. ಈಗ ನೀವೆ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು ? ಎಂದು  ಟ್ವಿಟ್ಟರ್ ನಲ್ಲಿ ಪ್ರಶ್ನಿಸುವ ಮೂಲಕ ನಳೀನ್ ಕುಮಾರ್ ಕಟೀಲ್ ವಿವಾದ ಸೃಷ್ಠಿಸಿದ್ದರು.

ವಿವಾದ ಟ್ವಿಟ್ ಗೆ ಟೀಕೆ ವ್ಯಕ್ತವಾಗಿದ್ದಕ್ಕೆ ಈ ಬಗ್ಗೆ ಕ್ಷಮೆ ಕೋಟಿ ಟ್ವಿಟ್ ಮಾಡಿರುವ ಸಂಸದ ನಳೀನ್ ಕುಮಾರ್ ಕಟೀಲ್, ನನ್ನ ಕೊನೆಯ ಎರಡು ಟ್ವಿಟ್ ಗಳಿಗೆ ಟೀಕೆ ವ್ಯಕ್ತವಾಗಿರುವುದನ್ನ ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಇಲ್ಲಿ ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವಿಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ ಎಂದು ಹೇಳಿದ್ದಾರೆ.

Key  words: Controversial –Twit- about- Rajiv Gandhi-Apologize -BJP MP -Nalin Kumar Kateel

 

website developers in mysore