ದ್ರೌಪದಿ ಮುರ್ಮು ಕುರಿತ ಟ್ವೀಟ್: ರಾಮ್ ಗೋಪಾಲ್ ವರ್ಮ ವಿರುದ್ದ FIR

Promotion

ಬೆಂಗಳೂರು, ಜೂನ್ 26, 2022 (www.justkannada.in): ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಕುರಿತು ಟ್ವೀಟ್ ಮಾಡಿ ಸಂಕಷ್ಟಕ್ಕೀಡಾಗಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

ದ್ರೌಪದಿ ಮುರ್ಮು ಅವರ ಕುರಿತು  ‘ಮಹಾಭಾರತ’ ಉಲ್ಲೇಖವಿರುವ ವಿವಾದಾತ್ಮಕ ಟ್ವೀಟ್‌ಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ದ್ರೌಪದಿಯು ರಾಷ್ಟ್ರಪತಿಯಾಗಿದ್ದರೆ ಪಾಂಡವರು ಯಾರು? ಮತ್ತು ಮುಖ್ಯವಾಗಿ ಕೌರವರು ಯಾರು?’ ಎಂದು ಆರ್.ಜಿ.ವಿ ಟ್ವೀಟ್ ಮಾಡಿದ್ದರು. ಇದು ವಿವಾದ ರೂಪ ಪಡೆದಿದ್ದು, ವಿವಾದಾತ್ಮಕ ಟ್ವೀಟ್‌ಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತೆಲಂಗಾಣ ಬಿಜೆಪಿ ನಾಯಕ ಗುಡೂರು ನಾರಾಯಣ ರೆಡ್ಡಿ ಅವರು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ವರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ.

ಆದರೆ ತನ್ನ ಟ್ವೀಟ್ ವಿವಾದ ರೂಪ ಪಡೆಯುತ್ತಿದ್ದಂತೆ ಆರ್.ಜಿ.ವಿ ಸ್ಪಷ್ಟನೆ ನೀಡಿದ್ದಾರೆ. ‘ಮಹಾಭಾರತದಲ್ಲಿ ದ್ರೌಪದಿ ನನ್ನ ನೆಚ್ಚಿನ ಪಾತ್ರವಾಗಿದೆ. ಆದರೆ ಹೆಸರು ಅಪರೂಪವಾಗಿರುವುದರಿಂದ ನಾನು ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ’ ಎಂದಿದ್ದಾರೆ.