ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ: ಅಣಶಿ ಘಾಟ್’ನಲ್ಲಿ ಭಾರಿ ವಾಹನ ಸಂಚಾರ ನಿಷೇಧ

Promotion

ಬೆಂಗಳೂರು, ಆಗಸ್ಟ್ 05, 2022 (www.justkannada.in): ಉತ್ತರಕನ್ನಡ  ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಣಶಿ ಘಾಟ್‌ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಈ ಸಂಬಂಧ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ಆದೇಶ ಹೊರಡಿಸಿದ್ದಾರೆ. ಕಾರವಾರ-ಜೋಯಿಡಾ ಸಂಚಾರ ಮಾರ್ಗದಲ್ಲಿ ಎರಡು ವಾರ ಭಾರೀ ವಾಹನಗಳಿಗೆ ಸಂಚಾರಕ್ಕೆ ನಿಷೇಧಿಸಲಾಗಿದೆ.

ಮಳೆ ಆರ್ಭಟಕ್ಕೆ ಗುಡ್ಡ ಕುಸಿತದ ಆತಂಕ ಸೃಷ್ಠಿಯಾಗಿದ್ದು, ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.

ಉತ್ತರಕನ್ನಡ  ಜಿಲ್ಲೆಯಲ್ಲಿ ನಿನ್ನೆ, ಇಂದು ಕೂಡ ವರುಣನ ಆರ್ಭಟ ಮುಂದುವರಿದಿದೆ. ಇನ್ನೂ ಮೂರು-ನಾಲ್ಕು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.