ಎನ್.ಟಿ.ಎಂ ಶಾಲೆ ಉಳಿಸಲು ಮುಂದುವರೆದ ಪ್ರತಿಭಟನೆ: ಸುತ್ತೂರು ಶಾಖಾ ಮಠದಲ್ಲಿ ಸಂಧಾನ ಸಭೆ.

ಮೈಸೂರು,ಜೂನ್,30,2021(www.justkannada.in):  ಮೈಸೂರಿನಲ್ಲಿ ಎನ್.ಟಿ.ಎಂ ಶಾಲೆ ಉಳಿಸಲು ಎನ್.ಟಿ.ಎಂ ಶಾಲೆ‌ ಉಳಿಸಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದ್ದು ಈ ಮಧ್ಯೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುತ್ತೂರು ಶಾಖಾ ಮಠದಲ್ಲಿ ಸಂಧಾನ ಸಭೆ ನಡೆಸಲಾಗುತ್ತಿದೆ.jk

ಸುತ್ತೂರು ಶಾಖಾ ಮಠದಲ್ಲಿ ಎನ್ ಟಿ ಎಂ ಶಾಲಾ ಹೋರಾಟ ಸಮಿತಿ ಹಾಗೂ ರಾಮಕೃಷ್ಣ ಆಶ್ರಮದ ಆಡಳಿತ ಮಂಡಳಿ ಜೊತೆ ಸಂಧಾನ ಸಭೆ ನಡೆಯುತ್ತಿದೆ. ಸುತ್ತೂರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಿಎಂ ಪುತ್ರ ವಿಜಯೇಂದ್ರ ಹಾಗೂ ಸ್ಥಳೀಯ ಮುಖಂಡರು ಸಂಧಾನ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಈ ನಡುವೆ ಎನ್.ಟಿ.ಎಂ ಶಾಲೆ ಉಳಿಸಲು.ಟಿ.ಎಂ ಶಾಲೆ‌ ಉಳಿಸಿ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಮಕ್ಕಳಿಗೆ ವಿವೇಕಾನಂದರ ವೇಷಭೂಷಣ ತೊಡಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಶಾಲೆ ಉಳಿವಿಗಾಗಿ ನಿರಂತರ ಹೋರಾಟ‌ ನಡೆಸಲಾಗುತ್ತಿದೆ. ಕನ್ನಡ ಶಾಲೆ ಮುಚ್ಚಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಶಾಲೆಯೂ ಇರಲಿ, ಸ್ಮಾರಕವು ಇರಲಿ. ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಿ ಶಾಲೆ ಮುಚ್ವುವುದು ಸರಿಯಲ್ಲ ಎಂದು ಪ್ರತಿಭಟನಾಕರಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Continued -protest – save -NTM school-suttur math- Negotiation