ಸಿನಿಮಾ ಮಾಡಲು ಹೊಸ ಕಥೆ, ಐಡಿಯಾ ಇದ್ರೆ ರಶ್ಮಿಕಾ ಸಂಪರ್ಕಿಸಿ !

ಬೆಂಗಳೂರು, ಮಾರ್ಚ್ 19, 2020 (www.justkannada.in): ನಟಿ ರಶ್ಮಿಕಾ ಮಂದಣ್ಣ ನಿರ್ಮಾಪಕಿ ಆಗುವ ತಯಾರಿಯಲ್ಲಿದ್ದಾರೆ.

ಹೌದು. ತಾವೇ ಸಿನಿಮಾ ಪ್ರೊಡ್ಯೂಸ್ ಮಾಡುವ ಯೋಚನೆ ಮಾಡುತ್ತಿರುವ ಸುಳಿವು ನೀಡಿದ್ದಾರೆ ರಶ್ಮಿಕಾ. ಹೊಸ ನಿರ್ದೇಶಕ, ನಿರ್ಮಾಪಕ, ಕತೆಗಾರರಿಗೆ ರಶ್ಮಿಕಾ ಆಫರ್ ಕೊಟ್ಟಿದ್ದಾರೆ.

ನಿರ್ದೇಶಕರಾಗಬೇಕು ಎಂದುಕೊಂಡವರು, ಒಳ್ಳೊಳ್ಳೆ ಐಡಿಯಾ, ಕತೆ ನಿಮ್ಮ ಬಳಿಯಿದ್ದರೆ ನನ್ನ ಇನ್ ಸ್ಟಾಗ್ರಾಂನಲ್ಲಿರುವ ಈಮೇಲ್ ಐಡಿಗೆ ಕಳುಹಿಸಿ. ನಮ್ಮದೇ ಒಂದು ಸಣ್ಣ ತಂಡವಿದೆ. ನಿಮ್ಮ ಕತೆ, ಐಡಿಯಾವನ್ನು ವಿಮರ್ಶಿಸಿ ಸಿನಿಮಾ ಮಾಡುವ ಬಗ್ಗೆ ಯೋಚನೆ ಮಾಡ್ತೀವಿ ಎಂದು ರಶ್ಮಿಕಾ ಹೇಳಿದ್ದಾರೆ.