ಬೆಳೆ ವಿಮೆ ಕೊಡದ ಬ್ಯಾಂಕ್​ಗೆ ದಂಡ

kannada t-shirts

ಬೆಂಗಳೂರು:ಜುಲೈ-21: ದಾಳಿಂಬೆ ಬೆಳೆ ಹಾನಿಯಾಗಿ ನಷ್ಟ ಹೊಂದಿದ ರೈತನಿಗೆ ಬೆಳೆವಿಮೆ ಇದ್ದರೂ ಹಣ ನೀಡದ ಖಾಸಗಿ ಬ್ಯಾಂಕ್​ಗೆ 15 ಸಾವಿರ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ, ವಿಮೆ ಮೊತ್ತ 2,45,600 ರೂ. ಪಾವತಿಸುವಂತೆ ಸೂಚಿಸಿದೆ.

ಚಳ್ಳಕೆರೆ ತಾಲೂಕಿನ ರುದ್ರಮುನಿ ರೆಡ್ಡಿ ಎಂಬುವರು ಕಾಟನ ದೇವರಕೋಟೆ ಗ್ರಾಮ ದಲ್ಲಿ 6 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದಿದ್ದರು. ಈ ಬೆಳೆಗೆ ಚಿತ್ರದುರ್ಗದ ಖಾಸಗಿ ಬ್ಯಾಂಕ್​ನ ಬ್ರಾ್ಯಂಚ್​ನಲ್ಲಿ ವಿಮೆ ಮಾಡಿಸಿದ್ದರು. ಬ್ಯಾಂಕ್​ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ದಾಳಿಂಬೆ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಪರಿಹಾರ ಹಣಕ್ಕಾಗಿ ಬೆಳೆವಿಮೆಗೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕ್​ಗೆ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಹೋರಾಟ: ಕೆಲ ತಿಂಗಳು ಕಳೆದರೂ ಬ್ಯಾಂಕ್​ನಿಂದ ಹಣ ಬಂದಿಲ್ಲ. ಮನವಿ ಮಾಡಿದರೂ ಅಧಿಕಾರಿಗಳು ವಿಮೆ ಹಣ ನೀಡಲು ಹಿಂದೇಟು ಹಾಕಿದ್ದರಿಂದ ಚಿತ್ರದುರ್ಗದ ಗ್ರಾಹಕರ ನ್ಯಾಯಾಲಯಕ್ಕೆ ರುದ್ರಮುನಿ ದೂರು ನೀಡಿದ್ದರು. ವಿಮೆ ಪಡೆಯಲು ರೈತ ಅರ್ಹತೆ ಹೊಂದಿದ್ದರೂ ನೀಡದಿರುವುದು ಕಂಡುಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಬ್ಯಾಂಕ್​ಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಆದರೆ, ಬ್ಯಾಂಕ್ ಸಿಬ್ಬಂದಿ ನ್ಯಾಯಾಲಯಕ್ಕೆ ಗೈರಾಗಿದ್ದರು.

ವಿಮೆ ನೀಡಲು ಸೂಚನೆ

ಒಂದು ಬ್ಯಾಂಕ್​ನಲ್ಲಿ ರೈತ ಬೆಳೆ ವಿಮೆ ಕಟ್ಟಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ನಾಶವಾದರೆ ವಿಮೆ ಮೊತ್ತದ ಶೇ.80 ಪರಿಹಾರ ಕೊಡುವುದು ಬ್ಯಾಂಕ್​ನ ಕರ್ತವ್ಯ. ಈ ಹಿನ್ನೆಲೆಯಲ್ಲಿ ರುದ್ರಮುನಿಗೆ ಬೆಳೆ ನಷ್ಟದ ಮೊತ್ತ 2,45,600 ರೂ.ಗಳನ್ನು ವಾರ್ಷಿಕ ಶೇ.9 ಪ್ರಮಾಣದ ಬಡ್ಡಿಯೊಂದಿಗೆ ನೀಡಬೇಕು. ಇವರು ಮಾನಸಿಕವಾಗಿ ನೊಂದಿರುವುದಕ್ಕೆ 10 ಸಾವಿರ ರೂ. ಪರಿಹಾರ ಹಾಗೂ ವ್ಯಾಜ್ಯದ ಖರ್ಚು-ವೆಚ್ಚ 5 ಸಾವಿರ ರೂ. ನೀಡುವಂತೆ ಬ್ಯಾಂಕ್​ಗೆ ನ್ಯಾಯಾಲಯ ಸೂಚಿಸಿದೆ.
ಕೃಪೆ:ವಿಜಯವಾಣಿ

ಬೆಳೆ ವಿಮೆ ಕೊಡದ ಬ್ಯಾಂಕ್​ಗೆ ದಂಡ
consumer-court-imposed-fine-to-bank-who-refuse-to-give-crop-insurance

website developers in mysore