ಏಕವಚನ ಪದಬಳಕೆಗೆ ಕಿಡಿ: ಮಂಡ್ಯದಲ್ಲಿ ನಿಖಿಲ್ ವಿರುದ್ದ  ಸಂಚು ಆಗಲಿಲ್ಲವೇ…?-ಸಿದ್ಧರಾಮಯ್ಯಗೆ ಶಾಸಕ ಸಾ.ರಾ ಮಹೇಶ್ ಟಾಂಗ್

ಮೈಸೂರು,ಡಿಸೆಂಬರ್,19,2020(www.justkannada.in):  ಚಾಮುಂಡೇಶ್ವರಿ ಸೋಲಿಗೆ ಬಿಜೆಪಿ -ಜೆಡಿಎಸ್ ಸಂಚು ಕಾರಣ  ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ  ಶಾಸಕ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.Teachers,solve,problems,Government,bound,Minister,R.Ashok

ರಾಜಕೀಯವೇ ಒಂದು ಸಂಚು. ಸಂಚನ್ನ ಒಬ್ಬರೇ ಮಾಡೋಲ್ಲ. ಮಂಡ್ಯದಲ್ಲಿ ನಿಖಿಲ್ ವಿರುದ್ದ ಸಂಚು ಆಗಲಿಲ್ಲವೇ? ಪ್ರಧಾನಿಯಾಗಿದ್ದ ದೇವೇಗೌಡರನ್ನ ತುಮಕೂರಿನಲ್ಲಿ ಸಂಚು ಮಾಡಿ ಸೋಲಿಸಲಿಲ್ಲವೇ?. ಸಂವಿಧಾನ ರಚಿಸಿದ ಅಂಬೇಡ್ಕರ್‌ರನ್ನೆ ಸೋಲಿಸಿದ್ರು ಅಲ್ವಾ ?. ರಾಜಕಾರಣದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಅಂತಹ ಮನಸ್ಥಿತಿ ಸಿದ್ದರಾಮಯ್ಯಗೆ ಇದೆ. ಆದ್ರೆ ಅದನ್ನ ಅವರು ಅರ್ಥ ಮಾಡಿಕೊಂಡು ಸ್ವೀಕರಿಸಲಿ ಎಂದು ಶಾಸಕ ಸಾ.ರಾ ಮಹೇಶ್ ಸಲಹೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಸಾ.ರಾ.ಮಹೇಶ್, ಸಿದ್ದರಾಮಯ್ಯ ಕುಮಾರಸ್ವಾಮಿ ಅವರನ್ನು ಮನಸು ಪೂರ್ತಿಯಾಗಿ ಸಿಎಂ ಮಾಡಿರಲಿಲ್ಲ. ಇದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ರೇವಣ್ಣ ಸಿದ್ದರಾಮಯ್ಯ ಮೊದಲಿನಿಂದಲೂ ಚೆನ್ನಾಗಿದ್ದಾರೆ. ಕುಮಾರಸ್ವಾಮಿ ಸಿದ್ದರಾಮಯ್ಯ ರಾಜಕೀಯವಾಗಿ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯರಿಗೆ ದೇವೇಗೌಡರ ಕುಟುಂಬದ ಮೇಲೆ ಎಂಥ ಅಭಿಪ್ರಾಯ ಇದೆ ಅನ್ನೋದು ಎಲ್ಲರಿಗು ಗೊತ್ತಿದೆ. ಕುಮಾರಸ್ವಾಮಿ ಸಿಎಂ ಆಗಿದ್ರು ಸಿದ್ದು ಹಿಂಬಾಲಕರು ಮಾತ್ರ ಸಿದ್ದರಾಮಯ್ಯನವರೇ ಸಿಎಂ ಅಂದ್ರು. ಅಂತಹ ಶಾಸಕರ ನಡುವೆ ಕುಮಾರಸ್ವಾಮಿ ಒಳ್ಳೆ‌ಕೆಲಸ ಹೇಗೆ ಮಾಡ್ತಾರೆ ಎಂದು ಪ್ರಶ್ನಿಸಿದರು.

ಜನ, ಅಧಿಕಾರಿಗಳು, ಶಾಸಕರಿಗೆ ಅತಿ ಸುಲಭವಾಗಿ ಸಿಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ….

ಜನರಿಗೆ, ಅಧಿಕಾರಿಗಳಿಗೆ ಸಿಗುತ್ತಿರಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ. ಸಾ.ರಾ ಮಹೇಶ್,  ಜನ, ಅಧಿಕಾರಿಗಳು, ಶಾಸಕರಿಗೆ ಅತಿ ಸುಲಭವಾಗಿ ಸಿಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ.  ಸಿದ್ದರಾಮಯ್ಯ ಏನಾದರೂ ಟೀಕೆ ಮಾಡಲಿ.  ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿಯಾದವರ ಪೈಕಿ ಜನರಿಗೆ ಸುಲಭವಾಗಿ ಸಿಗುವ ಸಿಎಂ ಅನ್ನಿಸಿಕೊಂಡವರು ಕುಮಾರಸ್ವಾಮಿ.  ಕುಮಾರಸ್ವಾಮಿ ನಿಮಗಿಂತ ಮುಂಚೆ ಸಿಎಂ ಆದವರು. ಏನಾದರೂ ಟೀಕೆ ಮಾಡಿ, ಆದರೆ ಮಾತನಾಡುವಾಗ ಭಾಷೆಯ ಮೇಲೆ ಹಿಡಿತ ಇರಲಿ. ನೀವು ನಮ್ಮ ಪಕ್ಷದಿಂದ ಅರ್ಥ ಮಂತ್ರಿಯಾಗಿ 7 ಬಜೆಟ್ ಮಂಡಿಸಿದ್ದೀರಿ.  ಐದು ವರ್ಷ ಪೂರ್ಣಾವಧಿ ಸಿಎಂ ಆಗಿದ್ದ ಬಗ್ಗೆ ಗೌರವ ಇದೆ.  ರಾಜ್ಯದಲ್ಲೇ ಅತಿಹೆಚ್ಚು ಸಾಲ ಮಾಡಿದ ಸಿಎಂ ಎಂಬುದೂ ಗೊತ್ತಿದೆ. ಮೈಸೂರು ಭಾಗದವರು ಅಂತ ನಾವು ಅದೆಲ್ಲವನ್ನೂ ಮಾತನಾಡುವುದಿಲ್ಲ ಎಂದು ಚಾಟಿ ಬೀಸಿದರು.conspiracy-against-nikhil-mandya-mla-sa-ra-mahesh-tong-siddaramaiah

ಏಕವಚನ ಪದ ಬಳಕೆ ಬಗ್ಗೆ ಸಿಡಿಮಿಡಿ: ಮಾಜಿ ಸಿಎಂ ಸಿದ್ಧರಾಮಯ್ಯಗೆ ಶಾಸಕ ಸಾ.ರಾ ಮಹೇಶ್ ಎಚ್ಚರಿಕೆ….

ಏಕವಚನ ಪದ ಬಳಕೆ ಬಗ್ಗೆ ಸಿಡಿಮಿಡಿಗೊಂಡ ಶಾಸಕ ಸಾ.ರಾ ಮಹೇಶ್, ಸಿದ್ದರಾಮಯ್ಯನವರೇ ಮಾತನಾಡುವಾಗ ಭಾಷೆಯ ಮೇಲೆ ಹಿಡಿತ ಇರಬೇಕು. ಏಕವಚನದಲ್ಲಿ ನೀವು ಮಾತನಾಡಿದರೆ ಬೇರೆಯವರು ಅದೇ ಮಾಡುತ್ತಾರೆ. ನೀವು ಹಿರಿಯ ರಾಜಕಾರಣಿಗಳು ನಿಮಗೆ ಟೀಕೆ ಮಾಡುವ ಹಕ್ಕಿದೆ. ಆದ್ರೆ ಪದಬಳಕೆ ಸರಿಯಾಗಿರಲಿ. ನಮ್ಮಂತ ಕಿರಿಯ ರಾಜಕಾರಣಿಗಳಿಗೆ ನಿಮ್ಮ ಭಾಷೆ ದಾರಿದೀಪವಾಗಿರಲಿ ಎಂದು ಸಲಹೆ ನೀಡಿದರು.

ನೀವೊಬ್ಬ ಹಿರಿಯ ರಾಜಕಾರಣಿ.  ನಮ್ಮವಂಥವರಿಗೆ ಮಾರ್ಗದರ್ಶನ ಮಾಡುವಂತೆ ಇರಬೇಕು. ಅದನ್ನು ಬಿಟ್ಟು ನೀವೇ ಏಕವಚನದಲ್ಲಿ ಮಾತನಾಡಿದರೆ ಹೇಗೆ ? ನಿಮ್ಮ ವರ್ತನೆ ಹೀಗೆಯೇ ಮುಂದುವರಿದರೆ ಜನ ಸೂಕ್ತ ತೀರ್ಮಾನ ಮಾಡ್ತಾರೆ ಎಂದು  ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.

Key words:  conspiracy -against -Nikhil – Mandya -MLA  sa.ra Mahesh -Tong – Siddaramaiah.