ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಬಿಜೆಪಿ ನಾಯಕರ ಯುಟರ್ನ್ ಗೆ ಕಾರಣ ಬಹಿರಂಗಪಡಿಸಿದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

kannada t-shirts

ಮೈಸೂರು,ಮೇ,25,2021(www.justkannada.in): ಇತ್ತೀಚೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಬಿಜೆಪಿ ನಾಯಕರುಗಳೇ ತಿರುಗಿ ಬಿದ್ದಿರುವ ಘಟನೆ ಬಗ್ಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್  ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೆಲ ಆರೋಪಗಳನ್ನು ಮಾಡಿದ್ದಾರೆ.jk

ಈ ಸಂಬಂಧ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಿಷ್ಟು…

ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಬಿಜೆಪಿ ನಾಯಕರು ತಿರುಗಿಬಿದ್ದ ವಿಚಾರದಿಂದ ಅನುಮಾನಗೊಂಡು ಕಾಂಗ್ರೆಸ್‌  ಈ ಬಗ್ಗೆ ಮಾಹಿತಿ ಪಡೆಯಲು ಮುಂದಾಯಿತು. ಆಗ ಮೈಸೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಜಿಲ್ಲಾಧಿಕಾರಿ ದಿಢೀರ್  ಬಂದ್  ಮಾಡಿಸಿದ ವಿಚಾರವೇ ಡಿಸಿ ವಿರುದ್ಧ  ಬಿಜೆಪಿ ನಾಯಕರು ತಿರುಗಿ ಬೀಳಲು ಕಾರಣ ಎಂಬುದು ಸ್ಪಷ್ಟವಾಯಿತು.

ಯಾವ ಉದ್ದೇಶದಿಂದ ಜಿಲ್ಲಾಧಿಕಾರಿ ಈ ಖಾಸಗಿ ಕೇಂದ್ರಗಳನ್ನು ಬಂದ್ ಮಾಡಿಸಿದರು ಎಂಬ ಸತ್ಯಾಸತ್ಯತೆಯನ್ನು ಕಾಂಗ್ರೆಸ್ ಪಡೆದುಕೊಂಡಿತು. ಆರೋಗ್ಯ ಇಲಾಖೆಯ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಕೋವಿಡ್ ಸೆಂಟರ್ ಬಂದ್ ಮಾಡಿಸಿದರು. ಇದಕ್ಕೆ ಕಾರಣ, ಖಾಸಗಿ ಸೆಂಟರ್ ಗಳು ಸರ್ಕಾರ ನಿಗದಿ‌ ಮಾಡಿದ ಹಣಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದುದ್ದು.

ಮೈಸೂರಿನಲ್ಲಿ ಮೂರು ವಿಭಾಗದಲ್ಲಿ ಕೋವಿಡ್ ಸೆಂಟರ್ ಮಾಡಲಾಗಿತ್ತು. ಆದರೆ ಕೆಲವು ಕಡೆ ಡಿಎಚ್‌ಓ ಅನುಮತಿ ಇಲ್ಲದೆ ಕೆಲವು ಕೋವಿಡ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದಕ್ಕೆ  ಬಿಜೆಪಿ ನಾಯಕರೇ ಕುಮ್ಮಕ್ಕು ನೀಡಿದ್ದರು. ಕಾರಣ ಈ ಕೋವಿಡ್ ಸೆಂಟರ್‌ ನಿಂದ ಅವರಿಗೆ  ಹಣ ಸಂದಾಯವಾಗುತ್ತಿತ್ತು. ಜಿಲ್ಲಾಧಿಕಾರಿಗಳು  ದಿಢೀರ್ ಎಂದು ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಕಾರಣ ಆದಾಯಕ್ಕೆ ಖೋತಾ ಉಂಟಾಯಿತು.  ಇದರಿಂದ ಅಸಮಾಧಾನಗೊಂಡ ಬಿಜೆಪಿ ನಾಯಕರು ಜಿಲ್ಲಾಧಿಕಾರಿ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಲು ಶುರು ಮಾಡಿದರು.

ಸಂಸದ ಸ್ವಯಂಘೋಷಿತ ಟಾಸ್ಕ್‌ ಪೋರ್ಸ್ ಅಧ್ಯಕ್ಷ:

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ರಚಿಸಿರುವ ಕೋವಿಡ್ ಟಾಸ್ಕ್ ಫೊರ್ಸ್ ಗೆ ಯಾವುದೇ ಮಾನ್ಯತೆ ಇಲ್ಲ. ಸರ್ಕಾರದ ಯಾವ ನಿಯಮವನ್ನು ಪಾಲಿಸುತ್ತಿಲ್ಲ. ಬಹುತೇಕ ಟಾಸ್ಕಪೋರ್ಸ್‌ ನಲ್ಲಿ ಬಿಜೆಪಿಯವರೇ ಇದ್ದಾರೆ. ಇದಕ್ಕೆ ಸರ್ಕಾರದ ನೋಟಿಫಿಕೇಷನ್ ಎಲ್ಲಿದೆ ? ಈ ಎಲ್ಲಾ ಟಾಸ್ಕ್ ಪೋರ್ಸ್‌ನಲ್ಲಿ ಜಿಲ್ಲಾಧಿಕಾರಿ ಏಕೆ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನಿಸಿದರು.

ಸಂಸದರೇ ಎಲ್ಲಾ ನಾನೇ ಮಾಡುತ್ತೇನೆ ಅನ್ನುತ್ತಾರೆ. ಆದರೆ ರೆಮ್ಡಿಸಿವಿರ್ ಆಕ್ಸಿಜನ್ ಸರಬರಾಜು ವಿಚಾರದಲ್ಲಿ ನಿಮ್ಮ ಪಾತ್ರ ಏನು ? ಆಕ್ಸಿಜನ್ ದರ ಹಿಂದೆ ಎಷ್ಟಿತ್ತು ? ಈಗ ಎಷ್ಟಾಗಿದೆ ? ಇದಕ್ಕೆ ಸರ್ಕಾರ ಅನುಮತಿ ಕೊಟ್ಟಿದೆಯಾ ? ಬೇರೆ ಜಿಲ್ಲೆಯವರು ಆಕ್ಸಿಜನ್‌ ಗೆ ಏಕೆ ನಿಮ್ಮ ಬಳಿ ಅನುಮತಿ ಪಡೆಯಬೇಕು. ನೀವು ಸರ್ಕಾರಿ ಆಸ್ಪತ್ರೆ ಮೇಲೆ ಗಮನವಹಿಸುತ್ತಿಲ್ಲ. ಕೇವಲ‌ ಖಾಸಗಿ ಆಸ್ಪತ್ರೆ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದೀರಾ. ನಿಮ್ಮ ಕೊಡುಗೆ ಮೈಸೂರಿಗೆ ಏನು ಇಲ್ಲ,  ನಿಮ್ಮ ಕೊಡುಗೆ ಜೀರೋ  ಎಂದು ಎಂ. ಲಕ್ಷ್ಮಣ್ ಟೀಕಿಸಿದರು.

ಪ್ರಧಾನಿಗೆ ಪತ್ರ…

ಮೈಸೂರಿನ ಸಂಸದ ಕಾರ್ಯವೈಖರಿ ವಿರುದ್ಧ  ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ. ಬ್ಲ್ಯಾಕ್ ಫಂಗಸ್‌ ಗೆ ಚುಚ್ಚುಮದ್ದು ಸಿಗುತ್ತಿಲ್ಲ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಮೂರನೇ ಅಲೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸ್ಕ್ಯಾನ್‌ ರೇ ಅಲ್ಲಿ ಈ ಬಗ್ಗೆ ಸಭೆ ನಡೆಸಲಾಗಿದೆ. ಮೂರನೇ ಅಲೆಗೆ ಲೂಟಿ ಮಾಡಲು ಈಗಲೇ ಸಿದ್ದತೆ ಮಾಡುತ್ತಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸುತ್ತೇನೆ  ಎಂದು ಎಂ. ಲಕ್ಷ್ಮಣ್  ತಿಳಿಸಿದರು.

ಕೊರೊನಾ 2ನೇ ಅಲೆಯಲ್ಲಿ 5 ಸಾವಿರ ಕೋಟಿ ಲೂಟಿ…

ಕೊರೊನಾ ಎರಡನೇ ಅಲೆಯಲ್ಲಿ 5 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಜಿಲ್ಲಾವಾರು ಇದನ್ನು ಹಂಚಿಕೊಂಡಿದ್ದಾರೆ. ಆಕ್ಸಿಜನ್, ರೆಮಿಡಿಸಿಯರ್ ಲಸಿಕೆ ಸೇರಿ ಎಲ್ಲದರಲ್ಲೂ ಹಣ ಲೂಟಿ ಮಾಡಿದ್ದಾರೆ. ಪ್ಯಾಕೇಜ್ ಘೋಷಣೆ ಸಹ ಇದರ ಒಂದು ಭಾಗವಾಗಿದೆ.  ಈ ಮೂಲಕ ಹೆಣದ ಮೇಲೆ ದುಡ್ಡು ಮಾಡಲು ಹೊರಟಿದ್ದಾರೆ.  ಮೆಡಿಕಲ್ ಕಿಟ್‌ ನಲ್ಲೂ ಹಣ ಮಾಡುತ್ತಿದ್ದಾರೆ. ಯಾರಿಗೂ ಗೊತ್ತಾಗದಂತೆ ದುಡ್ಡು ಮಾಡುತ್ತಿದ್ದಾರೆ ಎಂದು ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.congress-spokesperson-m-lakshman-revealed-bjp-leaders-against-mysore-dc-rohini-sindhuri

ಟೆಸ್ಟಿಂಗ್ ಕಡಿಮೆ ಮಾಡಲಾಗಿದೆ. ದೇಶದಲ್ಲಿ 15 ಲಕ್ಷ ಜನರು ಸತ್ತಿದ್ದಾರೆ. ಆದರೆ ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ. ರೆಮಿಡಿಸಿಯರ್ ಆಕ್ಸಿಜನ್ ಅಭಾವ ಇವರಿಂದಲೇ ಸೃಷ್ಟಿಯಾಗಿದೆ ಎಂದು ಎಂ. ಲಕ್ಷ್ಮಣ್ ಕಿಡಿಕಾರಿದರು.

Key words: Congress- spokesperson -M Lakshman- revealed -BJP leaders’ –against- Mysore DC- Rohini Sindhuri.

ENGLISH SUMMARY….

Congress spokesperson M. Lakshmana reveals reason for BJP leaders’ U-turn against Mysuru DC Rohini Sindhuri
Mysuru, May 25, 2021 (www.justkannada.in): Suspecting BJP leaders’ U-turn against Mysuru Deputy Commissioner Rohini Sindhuri, Congress spokesperson M. Lakshamana has made several allegations against them.
Addressing a press meet today M. Lakshama said that suspecting the incident of BJP leaders sudden opposition against Mysuru DC Rohini Sindhuri the Congress party started collecting information and got to know that the DCs decision to close the Covid care centers in Mysuru was the reason for the BJP leaders to make a U-turn against her.
The Mysuru Deputy Commissioner ordered closing the Covid care center based on the Health Department report as the private centers were collecting more money than the government-stipulated amount.
Covid care centers were formed in three divisions in Mysuru. But a few centers were functioning without the permission of the DHO as a result of BJP leaders’ influence, as they used to get money from those centers. As the DC ordered to close those centers the money the BJP leaders were receiving stopped. Hence, they started giving statements against the DC, he explained.congress-spokesperson-m-lakshman-revealed-bjp-leaders-against-mysore-dc-rohini-sindhuri
Further, he alleged that he would write a letter to the Prime Minister against the Mysuru MP alleging his inaction against the non-availability of injections for the black fungus disease. He also alleged that there is a scam in everything including oxygen, remdesivir, etc., and the BJP leaders have looted Rs. 5,000 crores during the Corona second wave.
Keywords: KPCC/ Spokesperson/ M. Lakshmana/ BJP leaders u-turn/ Mysuru DC/ reason/ Rs.5,000 cr. looted

website developers in mysore