ವೋಟ್ ಬ್ಯಾಂಕ್’ಗಾಗಿ ಪೌರತ್ವ ತಿದ್ದುಪಡಿಗೆ ಕಾಂಗ್ರೆಸ್ ವಿರೋಧ: ನಳೀನ್ ಕುಮಾರ್ ಕಟೀಲ್

ಬೆಂಗಳೂರು, ಜನವರಿ 04, 2019 (www.justkannada.in): ಮಹಾತ್ಮ ಗಾಂಧಿಜಿ ಆಸೆಯಂತೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ ಆದರೆ ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದೆ ಎಂದು  ಕೋಲಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ದೂರಿದರು.

ಓಟ್ ಬ್ಯಾಂಕ್ ಗೆ ಕಾಂಗ್ರೆಸ್ ಪೌರತ್ವವನ್ನು ವಿರೋಧಿಸುತ್ತಿದೆ. ಪೌರತ್ವ ಇಲ್ಲದವ್ರಿಗೆ ಕೊಡಲಾಗುವುದು, ಇರುವವರ ಬಳಿ ಬಳಿ ಕಿತ್ತಕೊಳ್ಳುವುದಿಲ್ಲ. ಇಟಲಿಯಿಂದ ಬಂದವ್ರಿಗೆ ಪೌರತ್ವ ಕೊಟ್ಟಿರುವ ದೇಶದಲ್ಲಿ ಬೇರೆಯವ್ರಿಗೆ ಕೊಡಬಾರದೆ? ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮಹತ್ವವಿದೆ ಎಂದು ಹೇಳಿದರು.

ಭಾರತದಲ್ಲಿ ನರೇಂದ್ರ ಮೋದಿಯವ್ರ ಶಕ್ತಿ ಬಲಯುತವಾಗಿದೆ. ಸಿಎಎ ವಿರೋಧಿಸುವ ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ಸಾಹಿತಿಗಳ ಬಗ್ಗೆ ಮಾತನಾಡುವುದಿಲ್ಲ. ಸುಳ್ಳು, ಅಪಪ್ರಚಾರ ಮಾಡುವವರು ರಾಷ್ಟ್ರ ವಿರೋಧಿಗಳು. ಈ ದೇಶಕ್ಕೆ ಕಾಂಗ್ರೆಸ್ ಪಾರ್ಟಿ ಸುಳ್ಳು ಮತ್ತು ಅಪಪ್ರಚಾರವನ್ನ ಮಾಡುತ್ತಿರುವುದರಿಂದ ರಾಷ್ಟ್ರ ವಿರೋಧಿಯಾಗಿದೆ ಎಂದರು. ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ಮುಸ್ಲಿಂ ಸಮುದಾಯದ ವಿರುದ್ದದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.