ಫೆ.14 ರಂದು ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ: ಮುಂದಿನ ರಾಜಕೀಯ ನಿರ್ಧಾರ – ಸಿಎಂ ಇಬ್ರಾಹಿಂ.

Promotion

ಮೈಸೂರು,ಫೆಬ್ರವರಿ,2,2022(www.justkannada.in): ಫೆಬ್ರವರಿ 14 ಲವರ್ಸ್ ಡೇ.  ಅಂದೇ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.  ಅಂದು ಯಾವ ಪಕ್ಷದ ಮೇಲೆ ಲವ್ ಆಗುತ್ತೆ ಅಂತಾ ತಿಳಿಸುತ್ತೇನೆ ಎಂದು ಕಾಂಗ್ರೆಸ್ ಎಂಎಲ್ ಸಿ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಇಬ್ರಾಹಿಂ,  ಫೇ.14 ರಂದು ಮುಂದಿನ ರಾಜಕೀಯ ನಿರ್ಧಾರ ಮಾಡುತ್ತೇನೆ. ಹೊಸ ಪಕ್ಷ ಕಟ್ಟೋದಿಲ್ಲ. ಬೇರೆ ಪಕ್ಷ ಸೇರುವೆ.  ನನ್ನ ಮುಂದೆ ಜೆಡಿಎಸ್, ಟಿಎಂಸಿ ಸಮಾಜವಾದಿ ಪಕ್ಷ ಈ ಮೂರು ಆಯ್ಕೆಗಳಿವೆ. ಜನರ ಅಭಿಪ್ರಾಯ ಪಡೆದು ಪಕ್ಷ ಆಯ್ಕೆ. ಮಾಡುತ್ತೇನೆ ಎಂದರು.

JDS- join- issue-CM Ibrahim- clarified.
ಕೃಪೆ-internet

ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಕನಸಿನ ಮಾತು.  ಸಿದ್ಧರಾಮಯ್ಯ ಅಸಹಾಯಕರಾಗಿದ್ದಾರೆ.  ರಾಜ್ಯದಲ್ಲಿ ಕಾಂಗ್ರೆಸ್ ಕಾಲ ಮುಗಿದು ಹೋಗಿದೆ ಎಂದು ಸಿಎಂ ಇಬ್ರಾಹಿಂ ಲೇವಡಿ ಮಾಡಿದರು.

Key words: congress-MLC-CM Ibrahim