ಶಾಸಕ ಸಂಗಮೇಶ್ ಸದನದಿಂದ ವಜಾ ಹಿನ್ನೆಲೆ: ಸ್ಪೀಕರ್ ನಡೆ ಖಂಡಿಸಿದ ಸಿದ್ಧರಾಮಯ್ಯ…

ಬೆಂಗಳೂರು,ಮಾರ್ಚ್,5,2021(www.justkannada.in): ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡಿದ ಹಿನ್ನೆಲೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನ ಸದನದಿಂದ  ಒಂದು ವಾರ ಅಮಾನತು ಮಾಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರ್ಧಾರವನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.jk

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಸ್ಪೀಕರ್ ಅವರ ಏಕಪಕ್ಷೀಯ ನಿರ್ಧಾರವನ್ನ ಅಸಂವಿಧಾನಿಕವೆಂದು ಟೀಕಿಸಿದ್ದಾರೆ. ಸದನದಲ್ಲಿ ಸಂಗಮೇಶ್ ಅವರಿಗಾಗಲೀ, ಪ್ರತಿಪಕ್ಷ ನಾಯಕ ನನಗಾಗಲೀ ಮಾತನಾಡಲು ಅವಕಾಶ ನೀಡಿಲ್ಲ. ಸ್ಪೀಕರ್ ಅವರ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Former CM- Siddaramaiah- warns- implemented-anugraha
siddaramaih#profile..

ಹಾಗೆಯೇ ಕೂಡಲೇ ಸದನದಿಂದ ಶಾಸಕ ಸಂಗಮೇಶ್ ರನ್ನ ವಜಾಗೊಳಿಸಿರುವ ನಿರ್ಣಯವನ್ನು ಹಿಂಪಡೆಯಬೇಕು ಎಂದು ಟ್ವಿಟ್ಟರ್ ನಲ್ಲಿ ಸ್ಪೀಕರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಿರ್ಣಯ ಹಿಂಪಡೆಯುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Key words: congress-MLA –Sangamesh-suspend-session-former CM- Siddaramaiah -condemns Speaker