ಗಾಯಗೊಂಡ ಆನೆಮರಿಗೆ ಚಿಕಿತ್ಸೆ ಕೊಡಿಸುವಂತೆ ರಾಹುಲ್ ಗಾಂಧಿ ಪತ್ರ: ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ.

kannada t-shirts

ಬೆಂಗಳೂರು,ಅಕ್ಟೋಬರ್,6,2022(www.justkannada.in):  ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ಸಾಗುತ್ತಿದ್ದು ದಸರಾ ಹಿನ್ನೆಲೆ ಕಳೆದ ಎರಡು ದಿನಗಳ ಕಾಲ ಬ್ರೇಕ್ ಬಿದಿತ್ತು. ಈ ನಡುವೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಗರಹೊಳೆಯ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಅವರು ಭೇಟಿ ನೀಡಿದ್ದು, ಈ  ಸಮಯದಲ್ಲಿ ಆನೆಮರಿಯೊಂದು ಗಾಯಗೊಂಡಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡಿರುವ ಆನೆಮರಿಗೆ ಚಿಕಿತ್ಸೆ  ಕೊಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ರಾಹುಲ್ ಗಾಂಧಿ ಪತ್ರ ಬರೆದಿದ್ದರು.  ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಹುಲ್ ಗಾಂಧಿ ನನಗೆ ಒಂದು ಪತ್ರ ಬರೆದಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ಆನೆ ಮತ್ತು ಮರಿ ನೋಡಿದ್ದಾರೆ.  ಎರಡೂ ಗಾಯಗೊಂಡಿರುವ ಬಗ್ಗೆ ಹಾಗೂ  ಅವುಗಳಿಗೆ ಚಿಕಿತ್ಸೆ ಕೊಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಲಿದ್ದೇವೆ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಪರ್ಯಾಯ ಯಾತ್ರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ,  ಯಾತ್ರೆ ವಿಚಾರವಾಗಿ ಮೊದಲು ನಾವೇ ಸಿದ್ಧತೆ ಮಾಡಿಕೊಂಡಿದ್ದವು.  ಬಿಎಸ್ ವೈ ಮತ್ತು ನನ್ನ ನೇತೃತ್ವದಲ್ಲಿ ಆಗಬೇಕಿತ್ತು.  ಆದರೆ ದಸರಾ ಕಾರ್ಯಕ್ರಮ ಬಂದಿದ್ದರಿಂದ ತಾತ್ಕಾಲಿಕವಾಗಿ ನಿಂತಿದೆ. ಭಾರತ್ ಜೋಡೋ ಯಾತ್ರೆಯಿಂದ ನಮಗೆ ತೊಂದರೆ ಇಲ್ಲ ಎಂದರು.

Key words: congress-leader-Rahul Gandhi-Elephant-treatment-CM-Basavaraj bommai

ENGLISH SUMMARY…

Rahul Gandhi writes to CM Bommai recommending treatment for injured elephant calf
Bengaluru, October 6, 2022 (www.justkannada.in): The Congress party’s ‘Bharath Jodo Yatra’ was halted for two days due to the historic Mysuru Dasara. In the meantime Congress leader Rahul Gandhi visited the Tiger Conservatory Forest in Nagarahole, where he found an injured elephant calf. He wrote to Chief Minister Basavaraj Bommai requesting for treatment of the injured elephant calf, for which the latter has responded positively.
Speaking in Bengaluru today, the Chief Minister informed that the Congress leader Rahul Gandhi has written a letter to him regarding an injured elephant and it’s calf at the Nagarahole forest. “He has requested me to make arrangements for the treatment of the elephant and its calf. I have spoken with the officials concerned regarding this and they will definitely make the required arrangements,” he said.
In his response to the alternative padayatra in reply to the Congress party’s Bharath Jodo Yatra, the Chief Minister Basavaraj Bommai informed that they had made all the arrangements earlier itself. “Our yatra should have commenced in my or B.S. Yediyurappa’s leadership. Due to the Mysuru Dasara program it is delayed. There is no threat to the BJP from the Congress party’s Bharath Jodo Yatra,” he added.
Keywords: Chief Minister Basavaraj Bommai/ Bharath Jodo Yatra/ Rahul Gandhi/ injured elephant calf

website developers in mysore