ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ.

ಮಂಗಳೂರು,ಸೆಪ್ಟಂಬರ್,13,2021(www.justkannada.in):  ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ , ಹಿರಿಯ  ನಾಯಕ ಆಸ್ಕರ್ ಫರ್ನಾಂಡಿಸ್(80) ಅವರು ಇಂದು ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಕರ್ ಫರ್ನಾಂಡಿಸ್ ಇಂದು ಕೊನೆಯುಸಿರೆಳೆದಿದ್ದಾರೆ ಆಸ್ಕರ್ ಫರ್ನಾಂಡೀಸ್ ಅವರು ಮನೆಯಲ್ಲಿ ಯೋಗ ಮಾಡುತ್ತಿದ್ದ  ವೇಳೆ ಜಾರಿ ಬಿದ್ದು ಮೆದುಳಿಗೆ ಪೆಟ್ಟಾಗಿತ್ತು. ಅವರನ್ನ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆಸ್ಕರ್ ಫರ್ನಾಂಡಿಸ್  ಉಡುಪಿ ಲೋಕಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದರು. ಎರಡು ಭಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಕೇಂದ್ರ ಸಾರಿಗೆ ಸಚಿವ, ಕಾರ್ಮಿಕ ಸಚಿವರಾಗಿ ಆಸ್ಕರ್ ಫರ್ನಾಂಡಿಸ್ ಕಾರ್ಯ ನಿರ್ವಹಿಸಿದ್ದರು.

ENGLISH SUMMARY…

Senior leader, former Union Minister Oscar Fernandes no more
Mangalore, September 13, 2021 (www.justkannada.in): Rajya Sabha member, former Union Minister, and veteran politician Oscar Fernandes (80) breathed his last today.
He was ailing for some time and was being treated in a private hospital in Mangalore, where he breathed his last today. Oscar Fernandes had a brain injury while exercising at home recently. He was kept under observation in ICU.
Oscar Fernandes was elected from the Udupi Lok Sabha constituency five times. He was a member of the Rajya Sabha twice. He has served as the Union Transport Minister and Labour Minister.
Keywords: Oscar Fernandes/ no more/ Mangalore/ private hospital

Key words: Congress leader- Oscar Fernandes- passes away-mangalore