ಬಹುಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಸಿದ ಕಾಂಗ್ರೆಸ್ ಗೆ ಹಿಂದುತ್ವದ ನೆನಪಾಗಿದೆಯೇ..?- ಮೈಸೂರು ಜಿಲ್ಲಾ ಬಿಜೆಪಿ ವಕ್ತಾರ ಟೀಕೆ…

ಮೈಸೂರು,ಆ,11,2020(www.justkannada.in): ದೇಶದ ಸ್ವಾತಂತ್ರ ಬಂದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುಕೊಂಡು ಬಂದಿದೆ. ಬಹುಸಂಖ್ಯಾತ ಹಿಂದೂಗಳಿಗೆ ಕಿರುಕುಳ ಕೊಡುತ್ತಾ ಅಲ್ಪಸಂಖ್ಯಾತ ಮುಸ್ಲೀಂರು, ಕ್ರಿಶ್ಚಿಯನ್ನರನ್ನ ಓಲೈಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಗೆ ಈಗ ದಿಢೀರನೆ ಹಿಂದುತ್ವದ ನೆನಪಾಗಿದೆ ಎಂದು ಮೈಸೂರು ಜಿಲ್ಲಾ ಬಿಜೆಪಿ ವಕ್ತಾರ ಕೆ.ವಸಂತ್ ಕುಮಾರ್ ಟೀಕಿಸಿದ್ದಾರೆ.jk-logo-justkannada-logo

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ವಸಂತ್ ಕುಮಾರ್, ಕಾಂಗ್ರಸ್ ಇಂದು ಹಿಂದುತ್ವದ ಘಟಕ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಭಾಷಣ ಬಿಗಿಯುತ್ತಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ..? ಇಡೀ ದೇಶದಲ್ಲಿ ನಿಮ್ಮನ್ನ ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ತಂದ ಮೇಲೆ ಹಿಂದುಗಳ ತಾಕತ್ತು ಗೊತ್ತಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.congress-hindutva-violence-hindus-mysore-district-bjp-spokesperson

ಹಾಗೆಯೇ ದೇಶಾದ್ಯಂತ ಸಾಧು ಸಂತರ ಮೇಲೆ ದಾಳಿ ನಡೆದಾಗ ಸೌಜನ್ಯಕ್ಕೂ ಸಂತಾಪ ಸೂಚಿಸಲಿಲ್ಲ.  ಸಾವಿರಾರು ದೇವಾಲಯಗಳನ್ನ ಒಡೆದು ಮಸೀದಿ ಚರ್ಚ್ ಗಳನ್ನ ನಿರ್ಮಾಣ ಮಾಡಿದಾಗಲೂ ಹಿಂದುಗಳ ಪರವಾಗಿ ಮಾತನಾಡಲು ಮನಸ್ಸು ಮಾಡದ ಕಾಂಗ್ರೆಸ್ ನಾಯಕರುಗಳಿಗೆ ಈಗ ಹಿಂದುತ್ವದ ಜಪ ಪ್ರಾರಂಭವಾಗಿದೆ.  ರಾಮಮಂದಿರ ಹೋರಾಟದ ಸಾವಿರಾರು ಹೋರಾಟಗಾರರನ್ನ ಹಿಂಸಿಸಿ ಜೈಲಿಗಟ್ಟಿದ್ದೀರಿ. ಆದರೆ ನಿಮ್ಮ ರಾಜಕೀಯವನ್ನ ಬಹುಸಂಖ್ಯಾತ ಹಿಂದೂಗಳು  ಅರ್ಥೈಸಿಕೊಂಡಿದ್ದೇವೆ. ಇನ್ನಾದರೂ ಹಿಂದುಗಳನ್ನ ಕೆಣಕುವುದನ್ನ ಬಿಡಲಿ ಎಂದು ವಸಂತ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Key words: Congress –Hindutva- violence –Hindus-Mysore district- BJP -spokesperson