ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಇಡೀ ರಾಜ್ಯಕ್ಕೆ ಹಿಜಾಬ್ ಹಾಕಿಸಿಬಿಡುತ್ತಾರೆ- ಸಚಿವ ಸುನೀಲ್ ಕುಮಾರ್ ವಾಗ್ದಾಳಿ.

Promotion

ಬೆಂಗಳೂರು,ಫೆಬ್ರವರಿ,9,2022(www.justkannada.in):   ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಇಂಧನ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಾಲೇಜುಗಳಲ್ಲಿ ಇಂತಹ ವಾತಾವರಣ ಸೃಷ್ಠಿ ಆಘಾತಕಾರಿ ಇದೊಂದು ವ್ಯವಸ್ಥಿತ ಪಿತೂರಿ ತಿಲಕ ಇಡಲು ಬಂದರೇ ಕಾಂಗ್ರೆಸ್ ನಾಯಕರು ವಿರೋಧ ಮಾಡುತ್ತಾರೆ. ಕಾಂಗ್ರೆಸ್  ಅಧಿಕಾರಕ್ಕೆ ಬಂದರೇ  ಇಡಿ ರಾಜ್ಯಕ್ಕೆ ಹಿಜಾಬ್ ಹಾಕಿಸಿಬಿಡುತ್ತಾರೆ ಎಂದು ಸಚಿವ ಸುನೀಲ್ ಕುಮಾರ್ ಕಿಡಿಕಾರಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುನೀಲ್ ಕುಮಾರ್,  ಸರ್ಕಾರ ಶಾಲೆ ಫೀಸ್ ಕಟ್ಟಲು ಆಗದವರು  ಕೋರ್ಟ್ ಮೆಟ್ಟಿಲು ಹತ್ತಲು ಯಾರ ಬೆಂಬಲ ಕೊಟ್ಟಿದ್ದಾರೆ.  ಮಂಗಳೂರಿನಲ್ಲಿ ಪಿಎಫ್ ಐ ಎಸ್ ಡಿಪಿಐ ಜತೆ ಕಾಂಗ್ರೆಸ್ ನವರೇ ಒಳ ಒಪ್ಪಂದ ಮಾಡಿಕೊಂಡಿದ್ದಾರೆ  ಶಾಲಾ ಕಾಲೇಜುಗಳಲ್ಲಿ  ಪ್ರತ್ಯೇಕವಾಗಿರುವುದನ್ನ ಗಮನಿಸಿದರೇ ದೇಶಕ್ಕೆ ಅಪಾಯಕಾರಿ.

ರಾಷ್ಟ್ರಧ್ವಜ ಕೆಳಗೆ ಇಳಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಸುಳ್ಳು ಹೇಳಿದ್ದಾರೆ.  ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದೇವೆ. ನಾವು ಯಾವತ್ತೂ ಈ ನೆಲದ ಕಾನೂನು ಕಾಪಾಡುತ್ತೇವೆ. ಕಾಂಗ್ರೆಸ್ ನವರು ದ್ವೇಷ ಹಚ್ಚುವ ಕೆಲಸ ಮಾಡುತ್ತಿದ್ದಾರೆ.  ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ಸಮವಸ್ತ್ರ ಸಂಹಿತೆಯನ್ನ ಎಲ್ಲರೂ ಪಾಲನೆ ಮಾಡಬೇಕು ಎಂದು ಸುನೀಲ್ ಕುಮಾರ್ ಹೇಳಿದರು.

Key words: congress-hijab-minister-sunil kumar