ಕಾಂಗ್ರೆಸ್‌ ನವರು ಭಯ ಮತ್ತು ಭ್ರಮೆಯಲ್ಲಿ ಬದುಕುತ್ತಿದ್ದಾರೆ- ಡಿಕೆಶಿ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ.

Promotion

ಮೈಸೂರು,ಸೆಪ್ಟಂಬರ್,19,2022(www.justkannada.in):  ರಾಹುಲ್ ಗಾಂಧಿ ಜೈಲಿನ ಅನುಭವ ಕೇಳಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್‌ ನವರು ಭಯ ಮತ್ತು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಭಯ ಇರುತ್ತೆ. ಯಾರಿಗೆ ಭಯ ಇರುತ್ತೋ ಅವರು ಹೀಗೆಲ್ಲ ಕೇಳಿಕೊಳ್ಳುತ್ತಾರೆ. ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಭಯ ಇದ್ದೇ ಇರುತ್ತೆ.  ನಾನು  ಭಯ ಪಡುತ್ತೇನಾ..?ಪ್ರತಾಪ್ ಸಿಂಹ ಭಯ ಪಡುತ್ತಾರಾ ? ಭಯ ಮತ್ತು ಭ್ರಮೆಯಲ್ಲಿ ಕಾಂಗ್ರೆಸ್‌ ನವರು ಬದುಕುತ್ತಿದ್ದಾರೆ ಎಂದರು.

ಮೈಸೂರು ದಸರಾ ಉದ್ಘಾಟನೆಗೆ ರಾಷ್ಟ್ರಪತಿ  ದ್ರೌಪದಿ ಮರ್ಮು ಆಗಮಿಸುವ ಹಿನ್ನೆಲೆ, ರಾಷ್ಟ್ರಪತಿಗಳು ದಸರಾಗೆ ಬರುತ್ತಾ ಇರುವುದು ಇದೇ ಮೊದಲು. ದೈವಿಭಕ್ತಿ ಹೊಂದಿರುವ ರಾಷ್ಟ್ರಪತಿಗಳು. ಪೂರ್ವ ತಯಾರಿ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

ಮೈಸೂರು ಜನರಲ್ಲಿ ವಿಶೇಷ ನಿವೇದನೆ ಮಾಡಿದ ಪ್ರಹ್ಲಾದ ಜೋಶಿ, ಮೈಸೂರಿಗರು ಬಹುದೊಡ್ಡ ಸಂಖ್ಯೆಯಲ್ಲಿ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಬನ್ನಿ. ರಾಷ್ಟ್ರಪತಿಗಳಿಗೆ ಹುಬ್ಬಳ್ಳಿಯಲ್ಲಿ ಪೌರ ಸನ್ಮಾನ ಮಾಡಲಾಗುವುದು ಎಂದರು.

ಎಂಎಲ್‌ಸಿ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡುವ ವಿಚಾರ‌ ಕುರಿತು ಪ್ರತಿಕ್ರಿಯಿಸಿಲು ನಿರಾಕರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , ಈ ಬಗ್ಗೆ ಅನಂತರ ಮಾತನಾಡುತ್ತೇನೆ ಎಂದರು.

Key words: Congress – fear -delusion- Union Minister -Prahlad Joshi -mysore