ಉಪಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ: ಈ ನಾಡಿನ ಅಭಿವೃದ್ಧಿಯೇ ನಮ್ಮ ಗುರಿ-ಸಿಎಂ ಬಿಎಸ್ ಯಡಿಯೂರಪ್ಪ…

ಬೀದರ್, 12,2021(www.justkannada.in): ಈ ನಾಡಿನ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.Agriculture,Pumpset,Adequate,Electricity,giving,Ask,Protest 

ಬೀದರ್ ನ ಬಸವಕಲ್ಯಾಣದಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಕೊರೋನಾ ಪ್ರಕರಣ ಜಾಸ್ತಿ ಆಗುತ್ತಿರೊದು ನಿಜ. ಈಗಾಗಲೇ ಕೊರೊನಾ ಜಾಸ್ತಿ ಇರುವ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ರಾತ್ರಿ 10 ಗಂಟೆಯಿಂದ 5 ಗಂಟೆವರೆಗೆ ಜಾರಿ ಮಾಡಿದ್ದೇವೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಕೊರೋನಾ  ಹೆಚ್ಚಾದರೆ ಅಲ್ಲೂ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ. ಜನ ಜಾಗೃತರಾಗಿ ಮಾಸ್ಕ್ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕಾರ ನೀಡಿದರೇ ಕೊರೋನಾ ಕಂಟ್ರೊಲ್ ಮಾಡಲು ಸಾಧ್ಯವಿದೆ. ಇನ್ನೊಂದು ವಾರ ಕಾಯ್ದು ನೋಡುತ್ತೇವೆ. ಪ್ರಕರಣ ಜಾಸ್ತಿ ಆದರೆ ನೈಟ್ ಕರ್ಫ್ಯೂ, ಎಲ್ಲೆಲ್ಲಿ ಏನೇನು ಮಾಡಬೇಕು ಎಂದು  ಹೇಳುತ್ತೇನೆ ಎಂದರು.

ಇದೇ 17 ರಂದು ನಡೆಯಲ್ಲಿರುವ ಉಪ ಚುನಾವಣೆಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಾಳೆ ವಾಪಸ್ ಹೋಗುತ್ತೇನೆ. ಬಸವಕಲ್ಯಾಣದಲ್ಲೇ ಐತಿಹಾಸಿಕ ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭಗೊಳಲ್ಲಿದೆ. ಮಾಜಿ ಸಚಿವ ಬಸವರಾಜ ಸೆಡಂ ಅವರಿಗೆ ಅನುಭವ ಮಂಟಪ ನಿರ್ಮಾಣ ಜವಾಬ್ದಾರಿ ನೀಡಲಾಗಿದೆ. ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಬಸವಕಲ್ಯಾಣ ಬದಲಾಗುತ್ತೆ. ಬಸವಕಲ್ಯಾಣ ಸಂಪೂರ್ಣ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತದೆ. ಈ ನಾಡು ಅಭಿವೃದ್ಧಿ ಯೇ ನಮ್ಮ ಗುರಿ ಎಂದು ಸಿಎಂ ಬಿಎಸ್ ವೈ ತಿಳಿಸಿದರು.Congress -dust off -by-election-Our goal -develop –CM- BS Yeddyurappa.

ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಗೆಲುವು ಎಂಬ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿ ಪಟವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯರು ಅವರ ಬಗ್ಗೆ ಗೌರವ ಇದೆ. ಈ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಿಂದ ನಾವು ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಾರಿಗೆ ನೌಕರರು ಗೌರವದಿಂದ ಬಂದು ಸೇವೆಗೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದ ನೌಕರರಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡಲ್ಲ ಎಂದು ತಿಳಿಸಿದರು.

Key words: Congress -dust off -by-election-Our goal -develop –CM- BS Yeddyurappa.