ಸಿಡಿ ಪ್ರಕರಣ ಸಂತ್ರಸ್ತೆ ಪೋಷಕರ ಬಗ್ಗೆ ಕಾಂಗ್ರೆಸ್ ಅಸಮಾಧಾನ: ಸರ್ಕಾರದ ವಿರುದ್ಧ ಎಂ. ಲಕ್ಷ್ಮಣ್ ವಾಗ್ದಾಳಿ…

ಮೈಸೂರು,ಏಪ್ರಿಲ್,1,2021(www.justkannada.in):  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ  ಸಂತ್ರಸ್ತೆ ಯುವತಿ ಪೋಷಕರ ಆರೋಪಿಸಿರುವ  ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.Illegally,Sand,carrying,Truck,Seized,arrest,driver

ಮೈಸೂರು ಜಿಲ್ಲಾ ಕಾಂಗ್ರೆಸ್ ಕಮಿಟಿ ಸುದ್ದಿಗೋಷ್ಠಿ ನಡೆಸಿ ಸಂತ್ರಸ್ತ ಯುವತಿ ಪೋಷಕರ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ತಮ್ಮ ಮಕ್ಕಳಿಗೆ ಅನ್ಯಾಯವಾದರೆ ಮಕ್ಕಳ ಪರವಾಗಿ ಪೋಷಕರು ನಿಲ್ಲುತ್ತಾರೆ. ಆ ಮೂಲಕ ಧೈರ್ಯ ತುಂಬುತ್ತಾರೆ. ಆದರೆ ಇಲ್ಲಿ ಪೋಷಕರು ಆರೋಪಿಯ ಜೊತೆಯಲ್ಲಿದ್ದಾರೆ. ಒಬ್ಬ ಮಹಿಳೆ ಪ್ರಬಲ ರಾಜಕಾರಣಿಯ ವಿರುದ್ಧ ದಿಟ್ಟ ಹೋರಾಟ ಮಾಡುತ್ತಿದ್ದಾಳೆ. ದೇಶದಲ್ಲಿ ಎಲ್ಲರೂ ಸಂತ್ರಸ್ತೆ ಮಹಿಳಾ ಪರವಾಗಿ ಮಾತನಾಡುತ್ತಿದ್ದಾರೆ. ಸುಪ್ರೀಂಕೋರ್ಟ್, ಹೈ ಕೋರ್ಟ್ ಗಮನಿಸುತ್ತಿದೆ. ನಿಮಗೆ ಮಿಸ್ ಲೀಡ್ ಮಾಡಿದ್ರೆ ದಯವಿಟ್ಟು ಹೇಳಿ. ನಿಮ್ಮ ಪರ ಕಾಂಗ್ರೆಸ್ ಇದೆ ಎಂದು ಹೇಳಿದ್ದಾರೆ.

ರೇಪ್ ಅಂಡ್ ಮರ್ಡರ್ ಬಿಜೆಪಿ ಪ್ರೊಫೆಷನ್ ಆಗಿದೆ….

ಶೋಭಾ ಕರಂದ್ಲಾಜೆ ಈ ಬಗ್ಗೆ ನೋ ಕಮೆಂಟ್ಸ್ ಎನ್ನುತ್ತಿದ್ದಾರೆ. ಬಿಜೆಪಿಯವರಿಗೆ ಇದೊಂದು ವೃತ್ತಿಯಾಗಿಬಿಟ್ಟಿದೆ. ರೇಪ್ ಅಂಡ್ ಮರ್ಡರ್ ಬಿಜೆಪಿ ಪ್ರೊಫೆಷನ್ ಆಗಿದೆ. ಪ್ರಮುಖವಾಗಿ ದಲಿತ ಹೆಣ್ಣುಮಕ್ಕಳನ್ನ ಟಾರ್ಗೆಟ್ ಮಾಡುವುದು ಬಿಜೆಪಿಯ ಉದ್ದೇಶವಾಗಿದೆ. ಉತ್ತರ ಪ್ರದೇಶದಲ್ಲಿ ದಿನಕ್ಕೆ ಎರಡು ಮೂರು ರೇಪ್ ಅಂಡ್ ಮರ್ಡರ್ ನಡಿತಿದೆ. ಈ ಪ್ರಕರಣದಲ್ಲು ದಲಿತ ಮಹಿಳೆಗೆ ಅನ್ಯಾಯವಾಗುತ್ತಿದೆ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.

ಒಬ್ಬ ಸಿಎಂ ಆರೋಪಿಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆರೋಪಿಯನ್ನ ಆರೋಪ ಮುಕ್ತಿಯನ್ನಾಗಿಸುವುದು ಬಿಜೆಪಿಯ ಕೆಲಸ. ಬೊಮ್ಮಾಯಿಗೆ ಗೃಹ ಇಲಾಖೆ ಸೂಕ್ತವಾದುದ್ದಲ್ಲ. ದಯವಿಟ್ಟು ಖಾತೆ ಬದಲಾಯಿಸಿಕೊಳ್ಳಿ. ಪ್ರತಿಯೊಂದಕ್ಕು ಮೇಟಿ ಅಂತೀರಾ. ಮೇಟಿ ಕೇಸ್ ಗು ಈ ಕೇಸ್ ಗೂ ವ್ಯತ್ಯಾಸವಿದೆ. ಮೇಟಿ ಕೇಸ್ ನಲ್ಲಿ ಸಂತ್ರಸ್ತೆ  ದೂರು ಕೊಟ್ಟಿರಲಿಲ್ಲ.ಈ ಹಿನ್ನೆಲೆ ಸಂತ್ರಸ್ತೆ ಮಹಿಳಾ ಪರವಾಗಿ ಎಲ್ಲರೂ ನಿಲ್ಲಬೇಕು ಎಂದು ಕಾಂಗ್ರೆಸ್ ಮಾದ್ಯಮ ವಕ್ತಾರ ಲಕ್ಷ್ಮಣ್ ಆಗ್ರಹಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಬೇಕು…

ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ದೂರು ನೀಡಿದ ವಿಚಾರ ಕುರಿತು ಮಾತನಾಡಿದ ಎಂ. ಲಕ್ಷ್ಮಣ್,  ಸರ್ಕಾರದ ವಿರುದ್ಧ ಮಂತ್ರಿಯೊಬ್ಬರು ರಾಜ್ಯಪಾಲರಿಗೆ ದೂರು ನೀಡಿರುವುದು ಭಾರತದ ಇತಿಹಾದಲ್ಲಿ ಮೊದಲು. 1,400 ರೂ ಕೋಟಿ ನನ್ನ ಗಮನಕ್ಕೆ ಬಾರದೆ ಖರ್ಚು ಮಾಡಲಾಗಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಒಬ್ಬ ಹಿರಿಯ ರಾಜಕಾರಣಿ ಈ ಬಗ್ಗೆ ದೂರು ನೀಡಿದ್ದಾರೆ. ಒಂದು ತಿಂಗಳ ಹಿಂದೆಯೇ ಪ್ರಧಾನಿ ಹಾಗೂ ಪಕ್ಷದ ಉಸ್ತುವಾರಿ ನಾಯಕರಿಗೂ ಈಶ್ವರಪ್ಪ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಬೇಕು. ಕಾಂಗ್ರೆಸ್ ಪಕ್ಷ ಒತ್ತಾಯ ಮಾಡುತ್ತಿದೆ ಎಂದು ಎಂ. ಲಕ್ಷ್ಮಣ್ ಹೇಳಿದರು.

Key words: Congress -CD case –girl- parents-KPCC-spokeperson- Laxman