ಹಿಜಾಬ್  ಹಿಂದಿರುವ ಶಕ್ತಿಗಳೇ ಕಾಂಗ್ರೆಸ್ಸಿಗರು- ಸಿಎಂ ಬೊಮ್ಮಾಯಿ ಟೀಕೆ.

Promotion

ಮಂಡ್ಯ,ಮೇ,16,2022(www.justkannada.in): ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಆದಿಚುಂಚನಗಿರಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಿಜಾಬ್  ಹಿಂದಿರುವ ಶಕ್ತಿಗಳೇ ಕಾಂಗ್ರೆಸ್ಸಿಗರು. ಅವರ ವೈಪಲ್ಯ ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ.  ಮಾಡೋದೆಲ್ಲಾ ಮಾಡಿ ಅಮೇಲೆ ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ಹಿಜಾಬ್ ವಿವಾದ ಸತ್ಯ ಜಗತ್ತಿಗೆ ಗೊತ್ತಿದೆ. ಇದು ಕಾಂಗ್ರೆಸ್ ಗೆ ರೂಢಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೊಡಗು ಶಾಲೆಯಲ್ಲಿ ತ್ರಿಶೂಲ ದೀಕ್ಷೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಬಾಹಿರ ತರಬೇತಿಗೆ ಅವಕಾಶ ನೀಡಲ್ಲ ಎಂದರು.

Key words: Congress- behind-hijab-CM-Bommai.