ಪ್ರಧಾನಿ ಮೋದಿ ರೋಡ್ ​ಶೋ ವೇಳೆ ಆ್ಯಂಬುಲೆನ್ಸ್ ​​ಗಳನ್ನ ತರಲು ಕಾಂಗ್ರೆಸ್ ಸಂಚು; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ.

ಬೆಂಗಳೂರು,ಮೇ,5,2023(www.justkannada.in): ಮೇ 6 ಮತ್ತು 7ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ​ಶೋ ನಡೆಸಲಿದ್ದು ಈ ವೇಳೆ ಈ ವೇಳೆ ಆಂಬುಲೆನ್ಸ್​ಗಳನ್ನ ತರೋದಕ್ಕೆ ಕಾಂಗ್ರೆಸ್ ಸಂಚು ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ,  ಯಾವುದೇ ಆಂಬುಲೆನ್ಸ್​ಗೂ ರೋಡ್​ ಶೋ ವೇಳೆ ಭಂಗ ಮಾಡದೇ ಹೋಗಲು ಅವಕಾಶ ಇದೆ. ಆದರೆ ಆಂಬುಲೆನ್ಸ್ ಗಳಲ್ಲಿ ರೋಗಿ ಇದಾರಾ? ಇಲ್ವಾ. ಎಂದು ತಪಾಸಣೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಏಕೆಂದರೇ ರೋಡ್ ಶೋ ವೇಳೆ  ಆ್ಯಂಬುಲೆನ್ಸ್ ​​ಗಳನ್ನ ತರಲು ಕಾಂಗ್ರೆಸ್ ಷಡ್ಯಂತ್ರ ನಡೆಸಿದೆ ಎಂದು ಕಿಡಿಕಾರಿದರು.

ಮೇ 7ಕ್ಕೆ ನೀಟ್ ಪರೀಕ್ಷೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ನೀಟ್ ಪರೀಕ್ಷೆ ಬಗ್ಗೆ ಪ್ರಧಾನಮಂತ್ರಿ ಮೋದಿ ಗಮನಕ್ಕೆ ತಂದಿದದು, ರೋಡ್​​ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆ ಆಗಬಾರದು ಎಂದಿದ್ದಾರೆ. ಅದ್ದರಿಂದ  ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ, ಶನಿವಾರ ಮೋದಿ 26.5 ಕಿ.ಮೀ ರೋಡ್​​ ಶೋ ನಡೆಸಲಿದ್ದು, ಮತ್ತು ಭಾನುವಾರ ಚಿಕ್ಕ ರೋಡ್ ಶೋ ಇರುತ್ತದೆ. ಜೊತೆಗೆ ಮೋದಿ ರೋಡ್ ಶೋ ಮಾರ್ಗದಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿವೆ. ಹಾಲ್​ ಟಿಕೆಟ್​ ತೋರಿಸಿದರೆ ಪರೀಕ್ಷಾ ಕೇಂದ್ರಕ್ಕೆ ತೆರಳಬಹುದು. ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ಕೊಡಲು ಪೊಲೀಸರಿಗೆ ಸೂಚಿಸಲಾಗಿದೆ  ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Key words: Congress -ambulances – PM Modi-road show-Shobha Karandlaje