ಸಿಎಎ ಕುರಿತು ಗೊಂದಲ ಸೃಷ್ಠಿ: ಕಾಂಗ್ರೆಸ್ ಗೆ ವೋಟ್ ಬ್ಯಾಂಕ್ ನದ್ದೇ ಚಿಂತೆ –ಡಿಸಿಎಂ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ…

ಬಾಗಲಕೋಟೆ,ಡಿ,23,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಮತ್ತು ಕೆಲ ಸಂಘಟನೆಗಳು ಗೊಂದಲ ಸೃಷ್ಟಿ ಮಾಡುತ್ತಿವೆ. ಕಾಂಗ್ರೆಸ್ ನವರಿಗೆ ಒಂದು ಚಿಂತೆ ಇದೆ. ಅದೇ ವೋಟ್ ಬ್ಯಾಂಕ್ ನ  ಚಿಂತೆ ಎಂದು ಡಿಸಿಎಂ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸಿಎಎ ಕಾಯ್ದೆಯನ್ನ ಕೇವಲ ನಮ್ಮ ದೇಶದಲ್ಲಿ ಮಾತ್ರ ಜಾರಿ ಮಾಡಿಲ್ಲ. ವಿಶ್ವದಾದ್ಯಂತೆ ಜಾರಿ ಮಾಡಲಾಗಿದೆ. ಅಯಾದೇಶಗಳ ರಕ್ಷಣೆ ಭದ್ರತೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗಿದೆ. ಆದರೆ ಕಾಂಗ್ರೆಸ್ ಕೆಲ ಸಂಘಟನೆ ಗೊಂದಲ ಸೃಷ್ಠಿ ಮಾಡುತ್ತಿವೆ. ಭಾವನಾತ್ಮಕ ವಿಚಾರ ಕೆದಕಿ ದೇಶದ್ರೋಹಿ ಕೆಲಸ ಮಾಡುತ್ತಿವೆ. ದೇಶದ ಮುಸ್ಲೀಂರಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿ ಯಾವುದೇ ಸಮುಯದಾಯಕ್ಕೆ ಅನ್ಯಾಯವಾಗಲ್ಲ.  ಯಾರು ವೈರಿದೇಶದವರು ಅಕ್ರಮವಾಗಿ ನೆಲೆಸಿದ್ದರೋ ಅವರನ್ನ ಪತ್ತೆ ಹಚ್ಚಿ ಪೌರತ್ವ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಅದಕ್ಕೆ ಏಕೆ ಕಾಂಗ್ರೆಸಿಗರು ಅಡ್ಡಿ ಮಾಡ್ತಿದ್ದಾರೆ  ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಶ್ನಿಸಿದರು.

ಅಕ್ರಮ ವಲಸಿಗರಿಂದ ದೇಶದ ಆರ್ಥಿಕತೆ ಬುಡಮೇಲಾಗುತ್ತದೆ.  ದೇಶದಲ್ಲಿ ಭಯೋತ್ಪಾದನೆ ಸಹ ಇದೆ. ಇದನ್ನ ನಿಯಂತ್ರಣ ಮಾಡಬಾರದು ಎಂದ್ರೆ ಹೇಗೆ..? ಕಾಂಗ್ರೆಸ್ ಗೆ ಒಂದೇ ಚಿಂತೆ ಇದೆ ಅದು ವೋಟ್ ಬ್ಯಾಂಕ್ ಎಂದು ಗೋವಿಂದ ಕಾರಜೋಳ ಲೇವಡಿ ಮಾಡಿದರು.

Key words: Confusion – CAA- Congress – about -vote bank-DCM govinda karajol