ಎರಡೂ ಕ್ಷೇತ್ರಗಳಲ್ಲೂ ‘ಕೈ’ ಗೆಲ್ಲುವ ವಿಶ್ವಾಸ: ಶಾಸಕ ಮಹೇಶ್ ಗೆ  ಜಾತ್ಯಾತೀತ ನಿಲುವಿನ ಬಗ್ಗೆ ನಂಬಿಕೆ ಇಲ್ಲ ಎಂದ ಆರ್.ಧೃವನಾರಾಯಣ್

ಮೈಸೂರು,ನವೆಂಬರ್,5,2020(www.justkannada.in): ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನವಾಗಿದೆ ಹೀಗಾಗಿ ಕಾಂಗ್ರೆಸ್ ಜಯ ಸಾಧಿಸುತ್ತದೆ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.jk-logo-justkannada-logo

ನಗರದ  ಕಾಂಗ್ರೆಸ್ ಕಚೇರಿಯಲ್ಲಿ  ಕೆಪಿಸಿಸಿ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು., ಕಾರ್ಯಕ್ರಮದಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ ಬಾಂಡ್ ವಿತರಣೆ ಮಾಡಲಾಯಿತು. ಮಾಜಿ ಸಂಸದ ಧ್ರುವನಾರಾಯಣ್ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ 25 ಕಾರ್ಯಕರ್ತರಿಗೆ ಒಂದೊಂದು ಲಕ್ಷದ ಬಾಂಡ್ ಅನ್ನ ವಿತರಣೆ ಮಾಡಿದರು. ಈ ವೇಳೆ ವರುಣ ವಿಧಾನಸಭಾ ಕ್ಷೇತ್ರದ  ಶಾಸಕ ಯತಿಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ನಗರಾಧ್ಯಕ್ಷರು, ಜಿಲ್ಲಾಧ್ಯಕ್ಷರು ಸೇರಿ ಹಲವು ಕಾರ್ಯಕರ್ತರು ಭಾಗಿಯಾಗಿದ್ದರು.

ಬಳಿಕ ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆ ವಿಚಾರ ಕುರಿತು ಮಾತನಾಡಿದ ಆರ್. ಧೃವನಾರಾಯಣ್  ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಕೊರೊನಾ ಹಿನ್ನೆಲೆ ಓಟಿಂಗ್ ಪರ್ಸಂಟೇಜ್ ಕಡಿಮೆಯಾಗಿದೆ. ಇದರಿಂದ ಕಾಂಗ್ರೆಸ್ ಗೆ ಯಾವುದೇ ತೊಂದರೆ ಆಗುವುದಿಲ್ಲ. ಜನ ಬಿಜೆಪಿಯ ದುರಾಡಳಿಕ್ಕೆ ಬೇಸತ್ತಿದ್ದಾರೆ. ಬಹುಮತಗಳ ಅಂತರದಿಂದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎನ್. ಮಹೇಶ್ ಗೆ  ಜಾತ್ಯಾತೀತ ನಿಲುವಿನ ಬಗ್ಗೆ ನಂಬಿಕೆ ಇಲ್ಲ…

ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಬಿಜೆಪಿಗೆ ಬಿಎಸ್ಪಿ ಬೆಂಬಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ದೃವನಾರಾಯಣ್, ಈಗಾಗಲೇ ಬಿಜೆಪಿ ಹಾಗೂ ಎನ್ ಮಹೇಶ್ ನಡುವೆ ಮಿಲನವಾಗಿದೆ. ಹಿಂದೆ ಶಾಸಕ ಎನ್ ಮಹೇಶ್ ಕೋಮುವಾದಿ ಬಗ್ಗೆ  ಅವರ ವೈಖರಿ ಬಗ್ಗೆ ಮಾತನಾಡಿದ್ದನ್ನ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ತಾವು ಹಿಂದೆ ಏನ್ ಹೇಳಿದ್ರಿ ಈಗ ದಾರಿ ಹೇಗಿ ಸಾಗ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಮಹೇಶ್ ಗೆ  ಜಾತ್ಯತೀತ ನಿಲುವಿನ ಬಗ್ಗೆ ನಂಬಿಕೆ ಇಲ್ಲ ಈ ಹಿನ್ನೆಲೆ  ಕೋಮುವಾದಿ ಹಾದಿಯಲ್ಲಿ ಶಾಸಕ ಎನ್.ಮಹೇಶ್ ಸಾಗುತ್ತಿದ್ದಾರೆ ಎಂದು ಟಾಂಗ್ ನೀಡಿದರು.confidence - win –congress- both –shira-RR Nagar-R. Dhruvanarayan

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಹೋಗಿ  ಬಿಜೆಪಿ ಸರ್ಕಾರ ಬರಲು ನಾನೆಷ್ಟು ಕಾರಣನೋ ಅಷ್ಟೇ ಕಾರಣ ಶಾಸಕ ಎನ್ ಮಹೇಶ್ ಕೂಡ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಈ ಹೇಳಿಕೆಯನ್ನ ನೀರಾವರಿ ಸಚಿವ ಕೊಳ್ಳೇಗಾಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದರು. ಈ ಬೆಳವಣಿಗೆಗಳೇ ಎನ್.ಮಹೇಶ್  ಕೋಮುವಾದಿಗಳ ಜೊತೆ ಸೇರುತ್ತಿದ್ದಾರೆ ಎಂದು ತಿಳಿಸುತ್ತಿವೆ ಎಂದು ಮಾಜಿ ಸಂಸದ ಆರ್ ಧ್ರುವನಾರಾಯಣ್  ಲೇವಡಿ ಮಾಡಿದರು.

Key words: confidence – win –congress- both –shira-RR Nagar-R. Dhruvanarayan