ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ GST ದರ ಏರಿಕೆಗೆ ಖಂಡನೆ: ಮೈಸೂರಿನ RMC ಮಾರುಕಟ್ಟೆ ಸಂಪೂರ್ಣ ಬಂದ್….

Promotion

ಮೈಸೂರು,ಜುಲೈ,15,2022(www.justkananda.in): ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ GST ದರ ಏರಿಕೆ, ಸರ್ಕಾರದ ನೀತಿಯನ್ನು ವಿರೋಧಿಸಿ ಮೈಸೂರಿನ RMC ಮಾರುಕಟ್ಟೆ ಸಂಪೂರ್ಣ ಬಂದ್ ,ಮಾಡಲಾಗಿದೆ.

ತಮ್ಮ ಅಂಗಡಿ ಮುಂಗಟ್ಟಗಳಿಗೆ ಬೀಗ ಜಡಿದ ವರ್ತಕರು. ಮೈಸೂರಿನ RMC ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ. ಸದಾ  ಜನಜಂಗುಳಿಯಿಂದಿದ್ದ ಮಾರುಕಟ್ಟೆ ಸದ್ಯ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ 5% GST ಹೆಚ್ಚಳ, GST ಏರಿಕೆಯನ್ನ ಕೂಡಲೇ ವಾಪಸ್ ಪಡೆಯಬೇಕೆಂದು ವರ್ತಕರು ಆಗ್ರಹಿಸಿದ್ದಾರೆ.